Advertisement

Elon Musk ವಿರುದ್ಧ ಪರಾಗ್‌ ಅಗರ್ವಾಲ್‌ ಮೊಕದ್ದಮೆ

09:07 PM Apr 11, 2023 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೊ: ಕಳೆದ ವರ್ಷ ಟ್ವಿಟರನ್ನು ಎಲಾನ್‌ ಮಸ್ಕ್ ಖರೀದಿಸಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಇಒ ಪರಾಗ್‌ ಅಗರ್ವಾಲ್‌, ಮಾಜಿ ಮುಖ್ಯ ಕಾನೂನು ಅಧಿಕಾರಿ ವಿಜಯ್‌ ಗದ್ದೆ, ಮಾಜಿ ವಿತ್ತೀಯ ಅಧಿಕಾರಿ ನೆಡ್‌ ಸೆಗಾಲ್‌ರನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರ ವಿರುದ್ಧ ಮೂವರೂ ಸೋಮವಾರ ದಾವೆ ಹೂಡಿದ್ದಾರೆ.

Advertisement

ತಮಗೆ ಒಟ್ಟಾರೆಯಾಗಿ 8 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡುವುದು ಟ್ವಿಟರ್‌ನ ಜವಾಬ್ದಾರಿ ಎಂದು ಹೇಳಿದ್ದಾರೆ.

ಕೆಲಸದಿಂದ ಕಿತ್ತುಹಾಕಿದ ನಂತರ ಅಮೆರಿಕದ ತನಿಖಾ ಸಂಸ್ಥೆಗಳಿಂದ ಮೊಕದ್ದಮೆ, ವಿಚಾರಣೆಗಳನ್ನು ಎದುರಿಸಲಾಗಿದೆ. ಅದರ ಪರಿಹಾರವಾಗಿ 10 ಲಕ್ಷ ಡಾಲರ್‌ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೇಳಿ ಎಎಫ್ಪಿ ಹಾಕಿದ ಪ್ರಶ್ನೆಗೆ ಟ್ವಿಟರ್‌ ಎಂದಿನಂತೆ ಪೂಪ್‌ ಇಮೋಜಿ ಹಾಕಿ ಸುಮ್ಮನಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next