Advertisement

ಜೈಲಿನಲ್ಲಿ ಪೇಪರ್‌ ಬ್ಯಾಗ್‌ ತಯಾರಿಕೆ ತರಬೇತಿ

09:45 AM Jan 11, 2019 | |

ಬೆಳಗಾವಿ: ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಪೇಪರ್‌ ಬ್ಯಾಗ್‌ ತಯಾರಿಕಾ ತರಬೇತಿ ಶಿಬಿರವನ್ನು ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ಹಾಗೂ ಅಂಕುರ ವಿಶೇಷ ಮಕ್ಕಳ ಶಾಲೆ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೀತಿ ಕೋರೆ, ಕಾರಾಗೃಹ ನಿವಾಸಿಗಳು ಬಿಡುಗಡೆ ನಂತರ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ಇಂತಹ ಕರಕುಶಲ ತರಬೇತಿಗಳು ಅತೀ ಅವಶ್ಯಕ. ಕಾರಾಗೃಹದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂಥ ತರಬೇತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಸ್ವಶಕ್ತಿ ಘಟಕ ವತಿಯಿಂದ ವಿವಿಧ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಡುಗಡೆ ನಂತರ ಆರ್ಥಿಕವಾಗಿ ಸಬಲರಾಗಲು ಹಾಗೂ ಬದುಕು ರೂಪಿಸಿಕೊಳ್ಳಲು ಸರಕಾರ-ಸರಕಾರೇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ತರಬೇತಿಗಳನ್ನು ನಿವಾಸಿಗಳಿಗಾಗಿ ಆಯೋಜಿಸಲಾಗುತ್ತಿದೆ. ಇಂತಹ ತರಬೇತಿಗಳು ನಿವಾಸಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತವೆ ಎಂದು ಹೇಳಿದರು.

ಪೇಪರ್‌ ಬ್ಯಾಗ್‌ ತಯಾರಿಕೆಗೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲಿ ಇರುವ ರದ್ದಿ ಪೇಪರ್‌ ಬ್ಯಾಗ್‌ ತಯಾರಿಸಬಹುದು. ಈ ತರಬೇತಿ ಪ್ಲಾಸ್ಟಿಕ್‌ ಬ್ಯಾಗ್‌ ನಿರ್ಮೂಲನೆಯಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಉತ್ತಮ ಕೆಲಸಕ್ಕೆ ಕೈಜೋಡಿಸಿದ ತರಬೇತಿಯ ಆಯೋಜಕರ ಕಾರ್ಯ ಶ್ಲಾಘನೀಯ ಎಂದರು.

ಅಂಕುರ ಶಾಲೆಯ ಕಾರ್ಯದರ್ಶಿ ಗಾಯತ್ರಿ ಗಾವಡೆ ತರಬೇತಿ ಕುರಿತು ಮಾತನಾಡಿದರು. ವೈಶಾಲಿ ಭಾತಕಾಂಡೆ, ಹಾಗೂ ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ ಸದಸ್ಯ ಅಭಿಮನ್ಯು ಇದ್ದರು. ರಾಜಶ್ರೀ, ಶುಭಾಂಗಿ ಕುರನಕರ, ನಿಖೀಲ್‌ ಅವರು ನಿವಾಸಿಗಳಿಗೆ ಪೇಪರ್‌ ಬ್ಯಾಗ್‌ ತಯಾರಿಕೆಯ ತರಬೇತಿ ನೀಡಿದರು.

Advertisement

ತರಬೇತಿಯಲ್ಲಿ ಜೈಲರ್‌ ಎಸ್‌.ಐ. ಶಹಾಪುರಕರ, ಸಿಬ್ಬಂದಿಗಳಾದ ಶೆಟ್ಟರ ಹಾಗೂ ಎಂ.ಬಿ. ಗೂಳಿ ಇದ್ದರು. ತರಬೇತಿಯಲ್ಲಿ ಮಹಿಳಾ ನಿವಾಸಿಗಳು ಸುಮಾರು 70 ಪೇಪರ್‌ ಬ್ಯಾಗ್‌ಗಳನ್ನು ತಯಾರಿಸಿದರು. ಶಿಕ್ಷಕಿ ಎಸ್‌.ಎಂ. ಕೋಲ್ಕಾರ ನಿರೂಪಿಸಿದರು. ನಿವಾಸಿಗಳಾದ ಈರವ್ವಾ ತಿಗಡಿ ಹಾಗೂ ಪಾರ್ವತಿ ಪೂಜಾರಿ ಪ್ರಾರ್ಥಿಸಿದರು. ಹೊಂಗಲ ಸ್ವಾಗತಿಸಿದರು. ಉಮಾದೇವಿ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next