Advertisement

ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನತ್ತ ದ್ರಾವಿಡ್‌ ವಿಶೇಷ ಗಮನ

08:50 PM Dec 21, 2021 | Team Udayavani |

ಜೊಹಾನ್ಸ್‌ಬರ್ಗ್‌: ರವಿವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ.

Advertisement

ಇದರ ನಡುವೆ ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್‌ ಕೊಹ್ಲಿ ಈ ಬಾರಿಯಾದರೂ ಮೂರಂಕಿಯ ಗಡಿ ತಲುಪಬಹುದೇ ಎಂಬ ಪ್ರಶ್ನೆ ಹಾಗೂ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಅಹರ್ನಿಶಿ ಟೆಸ್ಟ್‌ನಲ್ಲಿ ಕೊಹ್ಲಿ ಕೊನೆಯ ಸಲ ಶತಕ ಸಿಡಿಸಿದ್ದರು.

ಸದ್ಯ ಕೊಹ್ಲಿ ಅವರ ಬ್ಯಾಟಿಂಗ್‌ನತ್ತ ಕೋಚ್‌ ರಾಹುಲ್‌ ದ್ರಾವಿಡ್‌ ವಿಶೇಷ ಗಮನಹರಿಸಿದ್ದಾರೆ. ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ದ್ರಾವಿಡ್‌ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್‌ ಲೋಪಗಳನ್ನು ತಿದ್ದುವ ಮೂಲಕ ಹೊಸ ಹೊಳಪು ನೀಡುವತ್ತ ಗಮನ ಹರಿಸಿ ತರಬೇತಿ ನೀಡುತ್ತಿದ್ದಾರೆ.

ಟೆಸ್ಟ್‌ನಿಂದ ಹೊರಬಿದ್ದ ನೋರ್ಜೆ
ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿ ಅನ್ರಿಚ್‌ ನೋರ್ಜೆ ಗಾಯದ ಸಮಸ್ಯೆಯಿಂದ ಭಾರತ ವಿರುದ್ಧದ ತವರಿನ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ.

Advertisement

“ವೇಗಿ ನೋರ್ಜೆ ಕಳೆದ ಟಿ20 ವಿಶ್ವಕಪ್‌ ವೇಳೆ ಗಾಯಕ್ಕೆ ಒಳಗಾಗಿದ್ದರು. ಇನ್ನೂ ಅವರು ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರು ಭಾರತದೆದುರಿನ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡುವುದಿಲ್ಲ’ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next