ಲಕ್ನೋ: ಹಾರ್ಡ್ ಹಿಟ್ಟಿಂಗ್ ಬ್ಯಾಟರ್ ಮತ್ತು ಸ್ಟಂಪರ್ ರಿಷಭ್ ಪಂತ್ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್‌ಗೆ 2023ರ ಐಪಿಎಲ್ ಎನ್ನುವುದು ನಿಜಕ್ಕೂ ಭಾರೀ ಸವಾಲು. ಇಲ್ಲಿನ ಪ್ರತಿಯೊಂದು ಪಂದ್ಯವೂ ಪಂಥಾಹ್ವಾನದಂತೆ. ಡೇವಿಡ್ ವಾರ್ನರ್ ಪಡೆ ಶನಿವಾರ ರಾತ್ರಿ ಕೆ.ಎಲ್. ರಾಹುಲ್ ನೇತೃತ್ವದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಸೆಣಸಾಡಲಿದ್ದು, ಮೊದಲ ಸವಾಲನ್ನು ಹೇಗೆ ನಿಭಾಯಿಸಲಿದೆ ಎಂಬುದೊಂದು ಕುತೂಹಲ.
ಆದರೆ ಶುಕ್ರವಾರ ಲಕ್ನೋದಲ್ಲಿ ಮಳೆಯಾಗಿದ್ದು, ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.
ಈ ಮುಖಾಮುಖೀಯ ತಾಣ ಲಕ್ನೋ ಸ್ಟೇಡಿಯಂ. ಸ್ವಾರಸ್ಯವೆಂದರೆ, ಕಳೆದ ಸಲ ಐಪಿಎಲ್‌ಗೆ ಧುಮುಕಿದ ಲಕ್ನೋಗೆ ಇದು ಮೊದಲ ತವರು ಪಂದ್ಯ. ನಾಯಕ ಹಾಗೂ ಕೀಪರ್ ಕೂಡ ಆಗಿರುವ ಕೆ.ಎಲ್. ರಾಹುಲ್ ತಮ್ಮ ವೃತ್ತಿ ಬದುಕಿನಲ್ಲೇ ಅತ್ಯಂತ ಕಠಿನ ಸನ್ನಿವೇಶದಲ್ಲಿರುವುದರಿಂದ ತಂಡದ ಓಟ ಹೇಗೆ ಸಾಗುತ್ತದೆ ಎಂಬ ಆತಂಕ ಇದ್ದೇ ಇದೆ. ಲಕ್ನೋ ಯಶಸ್ಸಿನಲ್ಲಿ ರಾಹುಲ್ ಬ್ಯಾಟಿಂಗ್ ಫಾರ್ಮ್ ನಿರ್ಣಾಯಕ. ಇವರ ಬ್ಯಾಟ್‌ನಿಂದ ರನ್ ಹರಿದು ಬಂದರೆ ತಂಡಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಕೂಡ ಸಾಧ್ಯವಾಗಲಿದೆ.
ಈ ಪಂದ್ಯಕ್ಕೆ ಡಿ ಕಾಕ್ ಲಭ್ಯರಿರುವು ದಿಲ್ಲ. ಇವರ ಬದಲು ಕೈಲ್ ಮೇಯರ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚು.