Advertisement

ಪುರಚ್ಚಿ ತಲೈವಿ ಆಡಳಿತ ಸ್ಥಾಪಿಸುವ ತನಕ ಧರ್ಮಯುದ್ಧ: ಪನ್ನೀರ್‌ ಶಪಥ

04:26 PM Feb 16, 2017 | Team Udayavani |

ಚೆನ್ನೈ : ನಿರ್ಗಮನ ಮುಖ್ಯಮಂತ್ರಿ ಓ ಪನ್ನೀರ್‌ ಸೆಲ್ವಂ ಅವರಿಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್‌ ಹಾಗೂ ಆಕೆಯ ಕುಟುಂಬದ ವಿರುದ್ಧದ ಧರ್ಮ ಯುದ್ಧವನ್ನು, ರಾಜ್ಯದಲ್ಲಿ  ಜೆ ಜಯಲಲಿತಾ ಅವರ ಆಡಳಿತೆಯನ್ನು ಪುನರ್‌ ಸ್ಥಾಪಿಸುವ ತನಕವೂ, ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ.

Advertisement

“ಪಕ್ಷ ಮತ್ತು ಸರಕಾರ ಪುನಃ ಏಕ ಕುಟುಂಬದ ಕೈವಶವಾಗುವುದನ್ನು ನಾವೆಲ್ಲರೂ ಒಗ್ಗೂಡಿ ತಡೆಯೋಣ; ರಾಜ್ಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಜನತಾ ಸರಕಾರವನ್ನು ಸ್ಥಾಪಿಸಲು ನಾವು ಶ್ರಮಿಸೋಣ; ಅಲ್ಲಿಯ ವರೆಗೂ ನಮ್ಮ ಹೋರಾಟವನ್ನು ನಾವು ಜತೆಗೂಡಿ ಮುಂದುವರಿಸೋಣ’ ಎಂದು ಪನ್ನೀರ್‌ಸೆಲ್ವಂ ಹೇಳಿದರು.

“ಪುರಚ್ಚಿ ತೈಲವಿ ಅಮ್ಮಾ ಸರಕಾರ ಪುನರ್‌ ಸ್ಥಾಪನೆಯಾಗುವ ತನಕವೂ ನಾವು ಧರ್ಮ ಯುದ್ಧವನ್ನು ಮುಂದುವರಿಸೋಣ’ ಎಂದು ಪನ್ನೀರ್‌ ಸೆಲ್ವಂ ಅವರು, ರಾಜ್ಯಪಾಲ ಸಿ ವಿದ್ಯಾಸಾಗರ ರಾವ್‌ ಅವರು ಶಶಿಕಲಾ ನಿಷ್ಠ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿರುವ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸರಕಾರ ರಚಿಸುವಂತೆ ಆಹ್ವಾನ ನೀಡಿದ ಬಳಿಕದಲ್ಲಿ ಹೊರಗೆಡಹಿದ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದರು. 

ಮಾಜಿ ಸಚಿವ ಕೆ ಪಿ ಮುನುಸಾಮಿ ಸಹಿತವಾಗಿ ತಮ್ಮ ಪಕ್ಷದ ನಾಯಕರೊಡಗೂಡಿ ಮಾಧ್ಯಮದೊಂದಿಗೆ ಮಾತನಾಡಿದ ಪನ್ನೀರ್‌ ಸೆಲ್ವಂ, ತಮ್ಮನ್ನು ಬೆಂಬಲಿಸಿದ ಹಿಂಬಾಲಕರು ಹಾಗೂ ಜನರಿಗೆ ಕೃತಜ್ಞತೆ ಹೇಳಿದರು. 

ಜಯಲಲಿತಾ ಅವರ ಜೀವಂತವಿದ್ದಾಗ ಎರಡು ಬಾರಿ ತಾತ್ಕಾಲಿಕ ಮುಖ್ಯಮಂತ್ರಿಯಾಗಿ, ಜಯಲಲಿತಾ ಅಪೇಕ್ಷೆ ಪ್ರಕಾರ, ಕರ್ತವ್ಯ ನಿಭಾಯಿಸಿದ್ದ ಪನ್ನೀರ್‌ ಸೆಲ್ವಂ, “ಅಮ್ಮಾ ಅನುಯಾಯಿಗಳ ಬೆಂಬಲದಿಂದ ನಾವು ಈ ಹೋರಾಟವನ್ನು ಜಯಿಸಿಯೇ ತೀರುವೆವು’ ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next