ಸಾಗರ: ಲೇಔಟ್‌ನ ನಿವೇಶನ ಬಿಡುಗಡೆ ವಿಚಾರದಲ್ಲಿ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯತ್ ಸಿಬ್ಬಂದಿ ನೀಡುತ್ತಿರುವ ಕಿರುಕುಳದಿಂದ ಮನನೊಂದು ವ್ಯಕ್ತಿಯೊರ್ವ ಪಂಚಾಯತ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕುಗ್ವೆ ಗ್ರಾಮದ ನಿವಾಸಿ ಶ್ರೀಕಾಂತ್ ನಾಯ್ಕ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ.
ಶ್ರೀಕಾಂತ್ ಗೆ ಸೇರಿದ ಲೇಔಟ್‌ನ ಶೇ. 60ರಷ್ಟು ನಿವೇಶನಗಳನ್ನು ಮೊದಲ ಹಂತದಲ್ಲಿ ನಿಯಮಾನುಸಾರ ಬಿಡುಗಡೆ ಮಾಡಿಕೊಡಲು ಅವರು ಪಂಚಾಯತ್‌ಗೆ 5.80 ಲಕ್ಷ ರೂ. ಪಾವತಿ ಮಾಡಿದ್ದಾರೆ. ಹಣ ಪಾವತಿ ಮಾಡಿದ್ದರೂ ನಿವೇಶನ ಬಿಡುಗಡೆ ಮಾಡದೆ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಕಾಂತ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಗುರುವಾರ ಪಂಚಾಯತ್ ಎದುರು ಧರಣಿ ನಡೆಸಿದ್ದರು.
ಗುರುವಾರ ನಡೆದ ಪಂಚಾಯತ್ ಸಭೆಯಲ್ಲಿ ತಮ್ಮ ಕೆಲಸ ಆಗುತ್ತದೆ ಎಂಬ ವಿಶ್ವಾಸದಲ್ಲಿ ಶ್ರೀಕಾಂತ್ ಇದ್ದರು ಎನ್ನಲಾಗಿದೆ. ಆದರೆ, ಶುಕ್ರವಾರ ಸಂಜೆಯವರೆಗೂ ಕೆಲಸ ಆಗದ ಕಾರಣ ಅವರು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅಗ್ನಿಪಥ್ ಯೋಜನೆಗೆ ವಿರೋಧ; ಬಿಹಾರ ಬಂದ್, ವಾಹನಗಳಿಗೆ ಬೆಂಕಿ, ಯುಪಿಯಲ್ಲಿ 260 ಮಂದಿ ಬಂಧನ
ಶ್ರೀಕಾಂತ್‌ಗೆ ನಗರದ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.