Advertisement
ಉಪನಿಷತ್ತಿನ ಕತೆಗೆ ಕಡಿಮೆ ಇಲ್ಲದಂತೆ ಪಂಚತಂತ್ರದಲ್ಲೊಂದು ಕತೆ ಬರುತ್ತದೆ. ಅದು ಎರಡು ತಲೆಯ ಹಕ್ಕಿಯ ಒಂದು ಕತೆ. ಎರಡು ತಲೆಯ ಹಕ್ಕಿಯೊಂದು ಮರದ ಮೇಲೆ ಕುಳಿತಿರುವಾಗ ನೀರಿನ ಮೇಲೆ ಹಣ್ಣೊಂದು ತೇಲುತ್ತಿರುವುದು ಕಾಣಿಸಿತು. ಹಣ್ಣೊಂದು ಅನಾಯಾಸವಾಗಿ ಸಿಗುವಾಗ ತಿನ್ನಬೇಕೆಂದು ಅನಿಸುವುದು ನಿಸರ್ಗ ಸಹಜ ಅಲ್ಲವೇ.
ಮತ್ತೂಂದು ಸಲ ಇನ್ನೊಂದು ಹಣ್ಣು ನೀರಿನಲ್ಲಿ ತೇಲುತ್ತಿರುವುದು ಕಾಣಿಸಿತು. ಹಕ್ಕಿ ಅದನ್ನು ಎರಡನೆಯ ತಲೆಯಲ್ಲಿ ಎತ್ತಿಕೊಂಡು ಬಂದಿತು. ಆದರೆ, ಅದು ವಿಷಕಾರಿಯಾದ ಹಣ್ಣು. ಅದನ್ನು ಕುಕ್ಕಿ ತಿನ್ನುತ್ತಿರುವ ಎರಡನೆಯ ತಲೆಯನ್ನು ತಡೆದು ಮೊದಲನೆಯ ತಲೆ ಹೇಳಿತು, “”ಅದು ವಿಷಕಾರಿಯಾದ ಹಣ್ಣು. ತಿನ್ನಬೇಡ”
“”ಇದನ್ನು ಮೊದಲು ನೋಡಿದ್ದು ನಾನು. ಹಾಗಾಗಿ, ತಿನ್ನುವುದು ನಾನೇ. ತಿನ್ನಬಾರದು ಎನ್ನಲು ನೀನ್ಯಾರು?”
“”ಅಲ್ಲ… ಅದು ಸೇರುವುದು ಒಂದೇ ಹೊಟ್ಟೆಗಲ್ಲವೆ? ವಿಷ ಏರಿ ಸತ್ತರೆ?”
“”ಅದು ನನಗೆ ಗೊತ್ತಿಲ್ಲ. ನಾನು ತಿನ್ನುವುದು ತಿನ್ನುವುದೇ. ಈ ಹಿಂದೆ ಹಣ್ಣು ಕೊಡದೆ ನೀನೊಬ್ಬನೇ ತಿಂದಿದ್ದಿ. ಈಗ ನಾನು ತಿನ್ನುವಾಗ ನೀನು ಆಕ್ಷೇಪಿಸಬಾರದು” ಎಂದಿತು ಎರಡನೆಯ ತಲೆ.
Related Articles
ಆದರೆ ಹಣ್ಣು ತಿನ್ನುವ ಉತ್ಸಾಹದಲ್ಲಿ ಎರಡನೆಯ ತಲೆಗೆ ಯೋಚಿಸುವ ವ್ಯವಧಾನವೇ ಉಳಿದಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಮೊದಲನೆಯ ತಲೆ ತನಗೆ ಕೊಡದೇ ಹಣ್ಣು ತಿಂದಿತ್ತು.
Advertisement
“”ನೀನು ಆವತ್ತು ಮಾಡಿದ ತಪ್ಪಿಗೆ ಇವತ್ತು ಶಿಕ್ಷೆ ಅನುಭವಿಸಬೇಕು” ಎಂದದ್ದೇ ಎರಡನೆಯ ತಲೆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನಲು ಶುರು ಮಾಡಿತು.ಹೊಟ್ಟೆಗೆ ಸೇರಿದ ಹಣ್ಣಿನಿಂದಾಗಿ ಹಕ್ಕಿಯ ದೇಹವಿಡೀ ವಿಷ ಆವರಿಸಿತು. ಕೆಟ್ಟ ವಿಚಾರಗಳಿಗೆ ಆ ತಲೆ, ಈ ತಲೆ ಎಂಬ ಭೇದವುಂಟೇ. ವಿಷವು ವ್ಯಾಪಿಸಲು ದೇಹದ ಆ ಭಾಗ ಈ ಭಾಗ ಎಂಬ ಭೇದವೂ ಇಲ್ಲ. ಹಕ್ಕಿಯೊಂದಿಗೆ ಎರಡೂ ತಲೆಗಳು ಸತ್ತು ಹೋದವು. ಕುಟುಂಬದ, ಸಮಾಜದ ಘಟಕಗಳು ಒಂದಕ್ಕೊಂದು ಪೂರಕವಾಗಿ ಇರಬೇಕೆಂಬುದನ್ನು ಸಾರುವ ಕತೆಯಿದು. ಒಬ್ಬರು ಹೇಳುವ ವಿಚಾರವನ್ನು ಮತ್ತೂಬ್ಬರು ತಾಳ್ಮೆಯಿಂದ ಆಲಿಸುವುದೇ ಒಳಿತಿನ ಲಕ್ಷಣ. ಕೃಷ್ಣ