Advertisement
ಬಾಕ್ಸಿಂಗ್ ರಿಂಗ್‌ನ ಮಧ್ಯೆ ನಿಂತು, ಮೇರಿ ಕೊಂ ರೀತಿ ಪಂಚ್ ಇಡುವುದು ಬಹುತೇಕ ಹೆಣ್ಮಕ್ಕಳ ಆಸೆ. ಗಟ್ಟಿಗತ್ತಿ, ಧೈರ್ಯವಂತೆ, ಗಂಡುಬೀರಿ, ಸಾಹಸಿ… ಅಂತೆಲ್ಲ ಕರೆಸಿಕೊಳ್ಳುವುದು ಒಂದು ಟ್ರೆಂಡ್ ಕೂಡ ಹೌದು. ಈ ಟ್ರೆಂಡ್‌ನ ಅನುಕರಣೆಯಲ್ಲಿ ಕರಾಟೆ ಮತ್ತು ಬಾಕ್ಸಿಂಗ್‌ನ ಮೇಲೆ ಅಭಿಮಾನಗಳು ಜಾಸ್ತಿ ಆಗಿವೆ. ಕಾರಣ, ಇವೆರಡೂ ಆತ್ಮರಕ್ಷಣೆಗೂ ನೆರವಾಗುತ್ತವೆ ಎಂಬ ಕಾರಣಕ್ಕೆ. ಅದರಲ್ಲೂ ಬಾಕ್ಸಿಂಗ್ ಎನ್ನುವುದು, ಆತ್ಮರಕ್ಷಣೆಯಲ್ಲದೇ, ಮಹಿಳೆಯನ್ನು ಸ್ಲಿಮ್ ಕೂಡ ಆಗಿಸುತ್ತದಂತೆ.
Related Articles
Advertisement
– ಪಂಚ್ ಮಾಡುವಾಗ, ದೇಹದ ತೂಕ ಒಂದು ಕಾಲಿನಿಂದ ಇನ್ನೊಂದು ಕಾಲಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದರಿಂದ ದೇಹದ ಸ್ಥಿರತೆ ಹೆಚ್ಚುವುದಲ್ಲದೆ ಸದೃಢ ಶರೀರ ನಿಮ್ಮದಾಗುತ್ತದೆ.
– ಬಾಕ್ಸಿಂಗ್ ಮಾಡುವುದರಿಂದ ಕೊಬ್ಬಿನಾಂಶ ದೇಹದ ಒಂದೇ ಭಾಗದಲ್ಲಿ ಶೇಖರಣೆಯಾಗುವುದಿಲ್ಲ. ಅಧಿಕ ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿದು, ಒಳ್ಳೆಯ ಆಕಾರ ಸಿಗುತ್ತದೆ.
– ಬಾಕ್ಸಿಂಗ್ ಕೇವಲ ದೇಹದ ಆರೋಗ್ಯ ಕಾಪಾಡುವ ವ್ಯಾಯಾಮವಷ್ಟೇ ಅಲ್ಲ, ಅದನ್ನು ಆತ್ಮರಕ್ಷಣೆಯ ತಂತ್ರವನ್ನಾಗಿಯೂ ಬಳಸಬಹುದು.
– ಇನ್ನೊಂದು ಅಚ್ಚರಿಯ ವಿಷಯವೆಂದರೆ, ಪಂಚಿಂಗ್ ಅಥವಾ ಬಾಕ್ಸಿಂಗ್ ಮಾನಸಿಕ ಆರೋಗ್ಯಕ್ಕೂ ಬಹಳ ಒಳ್ಳೆಯದು. ಒತ್ತಡ, ಖನ್ನತೆಯನ್ನು ನಿವಾರಿಸಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಈ ವ್ಯಾಯಾಮ ಸಹಕಾರಿ.