Advertisement

ಒಪ್ಪತ್ತಿನ ಒಬ್ಬಟ್ಟಿಗೆ ಹೆಸರುಬೇಳೆ ಪಾಯಸ!

03:56 PM Mar 25, 2017 | |

ಪ್ರತಿ ಹಬ್ಬಕ್ಕೂ ಇರುವಂತೆ ಯುಗಾದಿ ಹಬ್ಬಕ್ಕೂ ಒಂದು ಮೆನು ಇದೆ. ಪ್ರಮುಖವಾಗಿ ಯುಗಾದಿ ಎಂದರೆ ಮೊದಲು ನೆನಪಿಗೆ ಬರುವ ಸಿಹಿತಿನಿಸು ಎಂದರೆ ಅದು ಒಬ್ಬಟ್ಟು. ವರ್ಷದ ಮೊದಲ ದಿನ ಒಬ್ಬಟ್ಟು ಮಾಡಿ ಸಂಭ್ರಮಿಸುವ ಅದೆಷ್ಟೋ ಮನೆಗಳಿವೆ. ಆದರೆ, ಈಗ ಟ್ರೆಂಡ್‌ ಬದಲಾಗಿದೆ. ಮುಂಚೆಲ್ಲಾ ಒಬ್ಬಟ್ಟು ಮನೆಯಲ್ಲೇ ಮಾಡಬೇಕಿತ್ತು. ಈಗ ಏರಿಯಾಗೊಂದರಂತೆ ಹೋಳಿಗೆ ಮಾರುವ ಅಂಗಡಿಗಳು ಹುಟ್ಟಿಕೊಂಡಿವೆ. ಬರೀ ಯುಗಾದಿಗಷ್ಟೇ ಅಲ್ಲ, ಪ್ರತಿ ದಿನ ಒಬ್ಬಟ್ಟು ಸವಿಯುವಂಥ ಅವಕಾಶವನ್ನು ಆ ಹೋಳಿಗೆ ಅಂಗಡಿಗಳು ಜನರಿಗೆ ಮಾಡಿಕೊಡುತ್ತಿವೆ. ಇದರಿಂದ ಮನೆಯಲ್ಲಿ ಒಬ್ಬಟ್ಟು ಮಾಡುವವರ ಸಂಖ್ಯೆ ಸಹ ಬಹಳ ಕಡಿಮೆಯಾಗಿಬಿಟ್ಟಿದೆ. ಹಿರಿಯರು ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಕೆಲವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಕಿರಿಯರಲ್ಲಿ ಕೆಲವರಿಗೆ ಒಬ್ಬಟ್ಟು ಮಾಡುವ ವಿಧಾನ ಗೊತ್ತಿರುವುದಿಲ್ಲ. ಗೊತ್ತಿಲ್ಲದವರಿಗೆಂದೇ ಮೈ ಫಾರ್ಚುನ್‌ ಹೋಟೆಲ್‌ನವರು ಒಬ್ಬಟ್ಟು ತಯಾರಿಸುವ ವಿಧಾನವನ್ನು ಈ ಬಾರಿ “ಐ ಲವ್‌ ಬೆಂಗಳೂರು’ ಜೊತೆಗೆ ಹಂಚಿಕೊಂಡಿದ್ದಾರೆ. ಒಬ್ಬಟ್ಟಿನ ಜೊತೆಗೆ ಬೇಳೆ ಪಾಯಸದ ರೆಸಿಪಿ ಬೋನಸ್‌!

Advertisement

ಒಬ್ಬಟ್ಟು ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು
ರವೆ – 500 ಗ್ರಾಂ
ಅಕ್ಕಿ ಹಿಟ್ಟು – 200 ಗ್ರಾಂ
ಉಪ್ಪು- ಒಂದು ಚಿಟಿಕೆ
ಸಕ್ಕರೆ – ಒಂದು ಚಿಟಿಕೆ
ಬೆಲ್ಲ – 50 ಗ್ರಾಂ
ಹೆಸರು ಬೇಳೆ – 50 ಗ್ರಾಂ
ಏಲಕ್ಕಿ ಪುಡಿ – ಒಂದು ಚಿಟಿಕೆ
ತುಪ್ಪ- 50 ಎಂ.ಎಲ್‌
ನೀರು – 200 ಎಂ.ಎಲ್‌

ಮಾಡುವ ವಿಧಾನ
1. ಮೊದಲಿಗೆ ರವೆ, ಅಕ್ಕಿ ಹಿಟ್ಟು, ಉಪ್ಪು, ಸಕ್ಕರೆಗೆ ನೀರು ಹಾಕಿ ಕಲಸಿಕೊಳ್ಳಿ. 
2. ಹೆಸರುಬೇಳೆಯನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು, ನಂತರ ಒಣಗಿಸಿ, ಹದವಾಗಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಹಾಟ್‌ ಪ್ಯಾನ್‌ನಲ್ಲಿ ಹಾಕಿ, ತುಪ್ಪಸೇರಿಸಿ ಹುರಿಯಿರಿ. ಘಮ ಬರುವವರೆಗೂ ಹುರಿಯುವುದನ್ನು ಮುಂದುವರೆಸಿ. 
3. ಅದಕ್ಕೆ ತುರಿದ ಬೆಲ್ಲ, ಏಲಕ್ಕಿ ಪುಡಿ ಮಿಕ್ಸ್‌ ಮಾಡಿಟ್ಟುಕೊಳ್ಳಿ. 
4. ನಂತರ ಮೊದಲು ಮಾಡಿಟ್ಟುಕೊಂಡ ಹಿಟ್ಟಿನಲ್ಲಿ ಈ ಮಿಕ್ಸ್‌ ತುಂಬಿ ಉಂಡೆ ಮಾಡಿಟ್ಟುಕೊಳ್ಳಿ.
5. ಚಪಾತಿ ಲಟ್ಟಿಸುವಂತೆ ಲಟ್ಟಿಸಿ, ಅದನ್ನು ಹೆಂಚಿನ ಮೇಲೆ ಹಾಕಿ.
6. ನಂತರ ಅದಕ್ಕೆ ತುಪ್ಪಹಾಕಿ ಚೆನ್ನಾಗಿ ಬೇಯಿಸಿ.
ರುಚಿರುಚಿಯಾದ ಒಬ್ಬಟ್ಟು ತಯಾರು. ಬಿಸಿಬಿಸಿ ಒಬ್ಬಟ್ಟಿಗೆ ತುಪ್ಪ ಹಾಕಿಕೊಂಡು ತಿನ್ನಿರಿ.

ಬೇಳೆ ಪಾಯಸ ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು
ಹೆಸರು ಬೇಳೆ- 50 ಗ್ರಾಂ
ಕಾಯಿ ಹಾಲು – 150 ಎಂ.ಎಲ್‌
ಉಪ್ಪು- ಒಂದು ಚಿಟಿಕೆ
ಜಾಯಿಕಾಯಿ ಪುಡಿ – ಒಂದು ಚಿಟಿಕೆ
ಬೆಲ್ಲ- 150 ಗ್ರಾಂ
ಹಾಲು – 250 ಎಂ.ಎಲ್‌
ತುರಿದ ತೆಂಗಿನಕಾಯಿ – 10 ಗ್ರಾಂ
ಏಲಕ್ಕಿ ಪುಡಿ- ಒಂದು ಚಿಟಿಕೆ
ತುಪ್ಪ- 50 ಎಂ.ಎಲ್‌
ನೀರು-200 ಎಂ.ಎಲ್‌
ಡ್ರೆ„ ಫ‌ೂ›ಟ್ಸ್‌ – 50 ಗ್ರಾಂ

ಮಾಡುವ ವಿಧಾನ
1. ಮೊದಲಿಗೆ ಹೆಸರು ಬೇಳೆಗೆ ತುಪ್ಪಮತ್ತು ಸ್ವಲ್ಪ ಕಾಯಿ ಹಾಲಿನ ಜೊತೆಗೆ ಹುರಿಯಿರಿ. ಕಡಿಮೆ ಹೀಟ್‌ನಲ್ಲಿ, ಹಾಲು ಹೀರಿಕೊಳ್ಳುವವರೆಗೂ ಹದವಾಗಿ ಹುರಿದುಕೊಳ್ಳಿ
2. ನಂತರ ಉಳಿದ ಹಾಲನ್ನು ಹಾಕಿ ಚೆನ್ನಾಗಿ ಕಲಕಿರಿ
3. ಒಳಗಿರುವ ದಾಲ್‌ ಸ್ವಲ್ಪ$ಕರಗುತ್ತಿದ್ದಂತೆಯೇ ತುರಿದ ಬೆಲ್ಲ ಮತ್ತು ತೆಂಗಿನಕಾಯಿಯನ್ನು ಹಾಕಿ 
4. ಈಗ ಜಾಯಿಕಾಯಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ
5. ಚೆನ್ನಾಗಿ ಕುದಿಸಿ
ಆಗ ರುಚಿರುಚಿಯಾದ ಬೇಳೆ ಪಾಯಸ ತಯಾರು. ಸ್ವಲ್ಪ ತುಪ್ಪ ಹಾಕಿಕೊಂಡು ಕುಡಿದರೆ ಅದರ ಮಜವೇ ಬೇರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next