Advertisement

Panaje: ಗೋದಾಮಿನಿಂದ 90 ಸಾವಿರ ರೂ. ಮೌಲ್ಯದ ಅಡಿಕೆ ಕಳವು

11:46 PM Nov 24, 2023 | Team Udayavani |

ಪುತ್ತೂರು: ಅಡಿಕೆ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಹಾಕಿದ್ದ ಲಾಕ್‌ ಮುರಿದು ಕಳ್ಳರು ಸುಮಾರು 90 ಸಾವಿರ ಮೌಲ್ಯದ 2 ಕ್ವಿಂಟಾಲ್‌ 90 ಕೆಜಿ ಅಡಿಕೆಯನ್ನು ಕದ್ದ ಪ್ರಕರಣವೊಂದು ಪಾಣಾಜೆಯಲ್ಲಿ ನಡೆದಿದೆ.

Advertisement

ನ. 22ರ ರಾತ್ರಿ ಪಾಣಾಜೆ ಗ್ರಾಮದ ನಿವಾಸಿ ಅಬ್ದುಲ್‌ ಬುರುಹಾನ್‌ ಅವರು ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಗೋಡೌನ್‌ಗೆ ಹಾಕಿ ಬಾಗಿಲು ಹಾಕಿದ್ದಾರೆ.

ಮರುದಿನ ಬಂದು ನೋಡಲಾಗಿ ಯಾರೋ ಕಳ್ಳರು ಬಾಗಿಲು ಮುರಿದು ಕಳ್ಳತನ ನಡೆಸಿರುವುದು ಕಂಡುಬಂದಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next