Advertisement

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

01:42 AM Dec 26, 2024 | Team Udayavani |

ದಧೀಚಿ ಋಷಿಗಳ ಕಥೆ ಗೊತ್ತಿದೆ. ಅವರ ದೇಹದಿಂದಲೇ ಅಸ್ತ್ರ ತಯಾರಿಸಬೇಕೆಂದು ಹೇಳಿದಾಗ ಒಪ್ಪಿದರು. ದೇಹಾಭಿಮಾನ ಬಿಟ್ಟ ಕಾರಣವೇ ದೇಹವನ್ನೇ ಅಸ್ತ್ರ ಮಾಡುವಾಗ ಅವರಿಗೆ ದುಃಖವಾಗಲಿಲ್ಲ. ನನ್ನ ದೇಹ ಅಲ್ಲ ಎಂದು ಅವರು ತಿಳಿದುಕೊಂಡರು. ಹೀಗಾಗಿ ಆತ್ಮನಲ್ಲಿ ಸುಖ ದುಃಖವಾಗಲು ಕಾರಣ ದೇಹಾಭಿಮಾನವೇ. ಅಪಘಾತವಾದಾಗ ದೇಹದಲ್ಲಿ ರಕ್ತ ಬರುತ್ತದೆ.

Advertisement

ಇಲ್ಲಿ ದುಃಖವಾಗುವುದು ರಕ್ತ ಬಂದದ್ದರಿಂದಲ್ಲ. ಈ ದೇಹ ನನ್ನದು ಎಂದು ತಿಳಿದುಕೊಂಡಿರುವುದರಿಂದ ದೇಹದಲ್ಲಾಗುವ ದುಃಖವು ಆತ್ಮನಿಗಾಗುವುದು. ದೇಹಾಭಿಮಾನ ಬಿಡುವ ಪ್ರಾಕ್ಟಿಸ್‌ ಮಾಡಿದರೆ ಸುಖದುಃಖದಿಂದ ಹೊರಬರಲು ಸಾಧ್ಯ. ಪ್ರಾಕ್ಟಿಸ್‌ನ್ನು ಕ್ರಮೇಣ ಮಾಡಬೇಕು, ನಿರಂತರ ಅನುಸಂಧಾನದಲ್ಲಿ ಮಾಡಬೇಕು. ದೇಹದಲ್ಲಿ ಆಗುವಂತೆ ಮನಸ್ಸಿನ ಮೇಲೂ ದುಃಖವಾಗುತ್ತದೆ. ಯಾರಾದರೂ ಅವಮಾನ ಮಾಡಿದರೆ ಅವಮಾನವಾಯಿತು ಎಂದು ಬೇಸರಿಸುತ್ತೇವೆ. ಅವಮಾನ ಆದದ್ದು ಮನಸ್ಸಿಗೆ. “ಮನಸ್ಸಿನಲ್ಲಿ ನಾವು ದೊಡ್ಡ ಜನ’ ಎಂದು ತಿಳಿದುಕೊಂಡಿರುತ್ತೇವೆ.

ಆದರೆ ಬೇರೆಯವರು “ಚಿಕ್ಕ ಜನರ ಹಾಗೆ ಟ್ರೀಟ್‌ ಮಾಡಿದರು’ ಎಂದಿಟ್ಟುಕೊಳ್ಳಿ. ದುಃಖಕ್ಕೆ ಕಾರಣ ಮನಸ್ಸಿಗೆ ಆದ ದುಃಖ. ಮನಸ್ಸು ದೊಡ್ಡ ಜನ ಎಂದು ತಿಳಿದುಕೊಂಡ “ಇಗೋ’ಗೆ ದುಃಖವಾಯಿತು. ನಾನೇ “ನನ್ನ’ ಮನಸ್ಸು ಎಂದು, ನಮ್ಮ ಮಕ್ಕಳನ್ನು, ನಮ್ಮ ಬಂಧುಗಳನ್ನು “ನಾವು’ ಎಂದು ತಿಳಿಯುವುದು ಇದಕ್ಕೆ ಕಾರಣ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next