Advertisement

PAN Aadhaar Link: 10 ದಿನ ಬಾಕಿ –ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?

03:58 PM Mar 20, 2023 | Team Udayavani |

ನವದೆಹಲಿ: ಆಧಾರ್ ನಂಬರ್ ಜೊತೆ PAN ( Permanent Account Number) ನಂಬರ್ ಜೋಡಿಸುವುದನ್ನು ಭಾರತದ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಆಧಾರ್ ಮತ್ತು ಪಾನ್ 2023ರ ಮಾರ್ಚ್ 31ರೊಳಗೆ ಲಿಂಕ್ ಮಾಡಿಸದಿದ್ದರೆ ನಿಮ್ಮ PAN ನಿಷ್ಕ್ರಿಯಗೊಳ್ಳಲಿದೆ.

Advertisement

ಇದನ್ನೂ ಓದಿ:ಮಲಗುವ ಸಮಯದಲ್ಲಿ ವಿಡಿಯೋ ಗೇಮ್: ನಿದ್ರೆ ಮಾಡದೇ 17 ಗಂಟೆ ಗೇಮ್‌ ಆಡುವ ಶಿಕ್ಷೆ ಕೊಟ್ಟ ತಂದೆ.!

ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಆಗದಿದ್ದರೆ 2023ರ ಏಪ್ರಿಲ್ 1ರ ನಂತರ ಪಾನ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲ. ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಮಾಡಲು ಇನ್ನು ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು, ಒಂದು ವೇಳೆ ಈ ಅಂತಿಮ ಗಡುವಿನೊಳಗೆ ಲಿಂಕ್ ಮಾಡಿಸದಿದ್ದರೆ ಪಾನ್ ನಿಷ್ಕ್ರಿಯಗೊಳ್ಳುವುದರ ಜೊತೆಗೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂಬುದು ನೆನಪಿರಲಿ.

PAN, ಆಧಾರ್ ನಂಬರ್ ಜೋಡಣೆ ಕಡ್ಡಾಯವಾಗಿರುವುದರಿಂದ ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಕೂಡಲೇ ಲಿಂಕ್ ಮಾಡಿಸಿ. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಪ್ರಕಾರ, ಮಾರ್ಚ್ 31ರೊಳಗೆ ಆಧಾರ್ ಜೊತೆ ಲಿಂಕ್ ಆಗದ ಪಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿದೆ. ಕಾಯ್ದೆ ಪ್ರಕಾರ, ಭಾರೀ ದಂಡದ ಜೊತೆಗೆ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಮಾಡುವುದು ಹೇಗೆ?

Advertisement

Income tax department ಇ ಫೈಲಿಂಗ್ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಪಾನ್, ಆಧಾರ್ ನಂಬರ್ ಅನ್ನು ಲಿಂಕ್ ಮಾಡಬಹುದಾಗಿದೆ. (www.incometaxindiaefiling.gov.in)

SMS Linking: ನೀವು ಆಧಾರ್ ಮತ್ತು ಪಾನ್ ನಂಬರ್ ಅನ್ನು ಎಸ್ ಎಂಎಸ್ ಮಾಡುವ ಮೂಲಕವೂ ಲಿಂಕ್ ಮಾಡಿಸಬಹುದಾಗಿದೆ. 567678 ಅಥವಾ 56161 ನಂಬರ್ ಗೆ UIDPAN< ಸ್ಪೇಸ್ ಬಿಟ್ಟು>< PANನ ಹತ್ತು ನಂಬರ್ ನಮೂದಿಸಿ ಎಸ್ ಎಂಎಸ್ ಕಳುಹಿಸಿ.

Offline Linking: ಇದಲ್ಲದೇ ನೀವು ನಿಮ್ಮ ಪಾನ್ ಮತ್ತು ಆಧಾರ್ ಅನ್ನು ಸಮೀಪದ ಪಾನ್ ಸರ್ವೀಸ್ ಸೆಂಟರ್ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.

ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?

ನಮ್ಮ ಆಧಾರ್ ಮತ್ತು PAN ನಂಬರ್ ಲಿಂಕ್ ಆಗಿದೆಯಾ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ (eportal.incometax.gov.in)ಗೆ ಭೇಟಿ ನೀಡಿ. ಅಲ್ಲಿ ಎಡಭಾಗದಲ್ಲಿ ಕ್ವಿಕ್ ಲಿಂಕ್ ಕಾಣಿಸುತ್ತದೆ. ಅದರಲ್ಲಿ Link Aadhaar status ಅನ್ನು ಕ್ಲಿಕ್ ಮಾಡಿ.

ಎಂಟರ್ ದ ಫಾಲೋವಿಂಗ್ ಡೀಟೈಲ್ಸ್ ನಲ್ಲಿ ಪಾನ್ ನಂಬರ್ ಮತ್ತು ಕೆಳಗಡೆ ಆಧಾರ್ ನಂಬರ್ ಅನ್ನು ನಮೂದಿಸಿ. ಬಳಿಕ View Link Aadhaar status ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಾನ್ ಮತ್ತು ಆಧಾರ್ ಜೋಡಣೆ ಆಗಿದ್ದರೆ “Your PAN is already linked to given Aadhaar” ಎಂಬ ಸಂದೇಶ ಕಾಣಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next