Advertisement
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠದ ಮಠಾಧೀಶರಾದ ಶ್ರೀ 1ವಿದ್ಯಾಧೀಶ ತೀರ್ಥ ಶ್ರೀಪಾದರು ಮುಂದಿನ ಜ. 18 ರಂದು ಪರ್ಯಾಯ ಪೀಠವನ್ನು ಅಲಂಕರಿಸಲಿದ್ದು, ಪರ್ಯಾಯ ಪೂರ್ವಭಾವಿಯಾಗಿ ಶ್ರೀಗಳು ಸೆ. 21 ರಿಂದ ಅ. 21 ರವರೆಗೆ ಮುಂಬಯಿ ಹಾಗೂ ಇತರ ಉಪನಗರಗಳಲ್ಲಿ ವಿಶೇಷ ಉಪನ್ಯಾಸ, ಪಾದಪೂಜೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮಗಳ ಬಗ್ಗೆ ಜು. 22 ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಮುಂಬಯಿ ಸಮಿತಿಯು ಆಯೋಜಿಸಿದ್ದ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಪಲಿಮಾರು ಮಠ ಮೀರಾರೋಡ್ ಶಾಖೆಯ ರಾಧಾಕೃಷ್ಣ ಭಟ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಶ ಭಟ್ ಅವರು ವಂದಿಸಿದರು. ಸಭೆಯಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಶೇಖರ್ ಶೆಟ್ಟಿ, ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಗುರುಪ್ರಸಾದ್ ಭಟ್ ಘನ್ಸೋಲಿ, ಡಾ| ಪ್ರಭಾಕರ ಶೆಟ್ಟಿ, ಗುರುರಾಜ ನಾಯಕ್, ದಯಾಸಾಗರ್ ಚೌಟ, ಅಶೋಕ್ ಸುವರ್ಣ, ಶ್ರೀನಿವಾಸ ಚೌಧರಿ, ಬಾಲಕೃಷ್ಣ ಭಂಡಾರಿ, ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಪೇಜಾವರ ಮಠದ ಪ್ರಬಂಧಕ ಹರಿ ಎಂ. ಭಟ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿಯ ಅಷ್ಟ ಮಠಗಳು ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿವೆೆ. ಇಲ್ಲಿಯ ಪರ್ಯಾಯವಂತೂ ದೊಡ್ಡ ಉತ್ಸವವೇ ಆಗಿದೆ. ಈ ಬಾರಿಯ ಪರ್ಯಾಯ ಸಂದರ್ಭದಲ್ಲಿ ಉಡುಪಿಯಲ್ಲಿ ಬಡಜನತೆಗೆ ಒಂದು ಆಸ್ಪತ್ರೆ ನಿರ್ಮಾಣವಾಗಬೇಕು. ಅದರ ಮುಖಾಂತರ ಅವಳಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಜನತೆಗೆ ಪ್ರಯೋಜನವಾಗಬೇಕು. ಈ ಯೋಜನೆಯ ನೇತೃತ್ವವನ್ನು ಪಲಿಮಾರು ಶ್ರೀಗಳು ವಹಿಸಬೇಕು. ಈ ಯೋಜನೆಗೆ ಈಗಾಗಲೇ ಹಲವಾರು ಮಂದಿ ಮುಂದೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ಇತಿಹಾಸ ಪ್ರಸಿದ್ಧ ಉಡುಪಿ ಮಠದಲ್ಲಿ ಬಹಳಷ್ಟು ಸ್ವಾಮೀಜಿಗಳು, ಮಠಾಧೀಶರು ಶ್ರೀಕೃಷ್ಣನ ಸೇವಾನಿರತರಾಗಿದ್ದರು. ಆದರೆ ಪಲಿಮಾರು ಶ್ರೀಗಳ ಪರ್ಯಾಯ ಅವಿಸ್ಮರಣೀಯವಾಗಿರಬೇಕು. ಅದಕ್ಕಾಗಿ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ (ಗೌರವ ಪ್ರಧಾನ ಕಾರ್ಯದರ್ಶಿ : ಪರ್ಯಾಯ
ಉತ್ಸವ ಸಮಿತಿ, ಮುಂಬಯಿ).