ಬೇಕಾಗುವ ಸಾಮಗ್ರಿ:
ಪಾಲಕ್ ಸೊಪ್ಪು- ಎರಡು ಕಪ್, ತೆಂಗಿನತುರಿ- ಒಂದು ಕಪ್, ಸಾಸಿವೆ- ಎರಡು ಚಮಚ, ಹಸಿಮೆಣಸು- ಒಂದು, ಮೊಸರು – ಒಂದು ಕಪ್, ಉಪ್ಪು ರುಚಿಗೆ.
Advertisement
ತಯಾರಿಸುವ ವಿಧಾನ:ಹೆಚ್ಚಿದ ಪಾಲಕ್ ಸೊಪ್ಪನ್ನು ಬಾಣಲೆಗೆ ತುಪ್ಪ ಹಾಕಿ ಬಾಡಿಸಿಕೊಳ್ಳಿ ಅಥವಾ ನೀರಿನಲ್ಲಿ ಒಂದು ಸೆಕೆ ಬೇಯಿಸಿ ನೀರಿನಿಂದ ತೆಗೆದು ಆರಲು ಬಿಡಿ. ತೆಂಗಿನತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಇದಕ್ಕೆ ಸೇರಿಸಿ. ನಂತರ, ಮೊಸರು ಹಾಗೂ ಬೇಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ತುಪ್ಪದಲ್ಲಿ ಕರಿಬೇವಿನ ಒಗ್ಗರಣೆ ನೀಡಿ ಸರ್ವ್ ಮಾಡಬಹುದು.
ಬೇಕಾಗುವ ಸಾಮಗ್ರಿ:
ಮೂಲಂಗಿ ತುರಿ- ಆರ್ಧ ಕಪ್, ಸಣ್ಣಗೆ ಹೆಚ್ಚಿದ ಸೌತೆಕಾಯಿ- ಅರ್ಧ ಕಪ್, ಮೊಳಕೆ ಬರಿಸಿದ ಹೆಸರುಕಾಳು- ನಾಲ್ಕು ಚಮಚ, ತೆಂಗಿನತುರಿ- ಒಂದು ಕಪ್, ಮೊಸರು- ಒಂದು ಕಪ್, ಹಸಿಮೆಣಸು- ಒಂದು, ಉಪ್ಪು ರುಚಿಗೆ. ತಯಾರಿಸುವ ವಿಧಾನ:
ತೆಂಗಿನತುರಿಗೆ ಉಪ್ಪು, ಸಾಸಿವೆ, ಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ತುರಿದ ತರಕಾರಿ ಹಾಗೂ ಮೊಳಕೆ ಕಾಳುಗಳನ್ನು ಸೇರಿಸಿ ಬೇಕಷ್ಟು ಉಪ್ಪು, ನೀರು ಮತ್ತು ಮೊಸರು ಸೇರಿಸಿ ಹದಗೊಳಿಸಿ, ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ ಸರ್ವ್ ಮಾಡಬಹುದು.
Related Articles
Advertisement