Advertisement
ನಾವಿಂದು ಪಾಲಕ್ ಸೊಪ್ಪಿನಿಂದ ಪೂರಿ ಮಾಡುವುದು ಹೇಗೆ ಎಂದು ತಿಳಿಯೋಣ ಮುಖ್ಯವಾಗಿ ಈ ರೆಸಿಪಿ ತುಂಬಾನೇ ಸುಲಭ. ಮನೆಯಲ್ಲಿ ಇದನ್ನೂ ಒಮ್ಮೆ ಖಂಡಿತವಾಗಿಯೂ ಟ್ರೈ ಮಾಡಿ ನೋಡಿ…..
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು-1ಕಟ್ಟು, ಗೋಧಿ ಹಿಟ್ಟು-1ಕಪ್, ಮೈದಾ ಹಿಟ್ಟು-1ಕಪ್, ಹಸಿಮೆಣಸು-2,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ಜೀರಿಗೆ-1ಚಮಚ, ಎಣ್ಣೆ-ಕರಿಯಲು, ಉಪ್ಪು-ರುಚಿಗೆ ತಕ್ಕಷ್ಟು.
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹೆಚ್ಚಿಟ್ಟ ಪಾಲಕ್ ಸೊಪ್ಪನ್ನು ಹಾಕಿ ರುಬ್ಬಿರಿ ಇಟ್ಟುಕೊಳ್ಳಿ.ತದನಂತರ ಒಂದು ಪಾತ್ರೆಗೆ ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟು ನ್ನು ಹಾಕಿ ಅದಕ್ಕೆ ರುಬ್ಬಿಟ್ಟ ಪಾಲಕ್ ನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.ಆಮೇಲೆ ಎರಡು ಸ್ಪೂನ್ ಎಣ್ಣೆ ಮತ್ತು ಉಪ್ಪನ್ನು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿದ ನಂತರ ಕನಿಷ್ಠ 15 ರಿಂದ 20 ನಿಮಿಷಗಳವರೆಗೆ ಹಾಗೆ ಬಿಡಿ.ನಂತರ ಚಿಕ್ಕ-ಚಿಕ್ಕ ಉಂಡೆಗಳನ್ನಾಗಿ ಮಾಡಿ ಲಟ್ಟಣಗೆಯಿಂದ ಲಟ್ಟಿಸಿಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾದನಂತರ ಲಟ್ಟಿಸಿದ ಪೂರಿಯನ್ನು ಎಣ್ಣೆಯಲ್ಲಿ ಬಿಟ್ಟು ಜಾಲಿಸೌಟಿನಿಂದ ಒತ್ತಿದರೆ ಚೆನ್ನಾಗಿ ಉಬ್ಬುತ್ತದೆ.ಈಗ ಬಿಸಿ-ಬಿಸಿಯಾದ ಪಾಲಕ್ ಪೂರಿ ಆಲೂ ಸಾಗು ಜೊತೆ ತಿನ್ನಲು ಬಹಳ ರುಚಿಕರ.
Related Articles
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ-3, ಟೊಮೆಟೋ-2, ಕ್ಯಾಪ್ಸಿಕಂ-2, ಈರುಳ್ಳಿ-2, ಕ್ಯಾರೆಟ್-1, ಹಸಿಬಟಾಣಿ-50ಗ್ರಾಂ, ಹಸಿಮೆಣಸು-2, ಏಲಕ್ಕಿ-ಚಕ್ಕೆ-ಸ್ವಲ್ಪ, ತೆಂಗಿನ ತುರಿ- 4 ಚಮಚ, ಕರಿಬೇವು-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು, ಸಾಸಿವೆ,ಎಣ್ಣೆ.
Advertisement
ತಯಾರಿಸುವ ವಿಧಾನಆಲೂಗಡ್ಡೆ,ಕ್ಯಾರೆಟ್‌ಹೆಚ್ಚಿಕೊಂಡು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಸಿಬಟಾಣಿ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಇನ್ನೊಂದು ಕಡೆಯಲ್ಲಿ ಟೊಮೆಟೋ, ಕ್ಯಾಪ್ಸಿಕಂ, ಈರುಳ್ಳಿಯನ್ನು ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಹಸಿಮೆಣಸು,ಏಲಕ್ಕಿ ಮತ್ತು ತೆಂಗಿನ ತುರಿ ಇದೆಲ್ಲಾ ಪದಾರ್ಥಗಳನ್ನು ಹುರಿಯಿರಿ.ನಂತರ ಮಿಕ್ಸಿಗೆ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಆಮೇಲೆ ಬೇಯಿಸಿಕೊಂಡ ತರಕಾರಿಗಳ ಜೊತೆಗೆ ಟೊಮೆಟೋ, ಕ್ಯಾಪ್ಸಿಕಂ, ಈರುಳ್ಳಿಯನ್ನು ಹಾಕಿರಿ ನಂತರ ರುಬ್ಬಿದ ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.ಕೊನೆಗೆ ಸಾಸಿವೆ,ಕರಿಬೇವಿನ ಒಗ್ಗರಣೆಗೆ ಹಾಕಿದರೆ ರುಚಿಕರವಾದ ಆಲೂ ಸಾಗು ರೆಡಿ. *ಶ್ರೀರಾಮ್ ನಾಯಕ್