Advertisement

ಲಾಡೆನ್ ಆಯ್ತು, ಈಗ ಅಲ್ ಖೈದಾ ಮುಖಂಡ ಜವಾಹಿರಿ ಐಎಸ್ಐ ರಕ್ಷಣೆಯಲ್ಲಿ!

04:09 PM Apr 22, 2017 | Team Udayavani |

ವಾಷಿಂಗ್ಟನ್‌ : ಅಲ್‌ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ, ಹತ ಉಸಾಮಾ ಬಿನ್‌ ಲಾದನ್‌ನ ಗುರು ಹಾಗೂ ಉತ್ತರಾಧಿಯಾಗಿರುವ ಈಜಿಪ್ಟ್ ಸಂಜಾತ ಇಮಾನ್‌ ಅಲ್‌ ಜವಾಹಿರಿ ಪಾಕಿಸ್ಥಾನದ ಕುಖ್ಯಾತ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ರಕ್ಷಣೆಯಲ್ಲಿ ಬಹುತೇಕ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯೊಂದು ಹೇಳಿದೆ. 

Advertisement

ಅತ್ಯಂತ ಮಹತ್ವದ ತನಿಖಾ ವರದಿಯಲ್ಲಿ ನ್ಯೂಸ್‌ ವೀಕ್‌ ಈ ರೀತಿ ಹೇಳಿದೆ : 2001ರಲ್ಲಿ ಅಮೆರಿಕನ್‌ ಪಡೆಗಳು ಅಫ್ಘಾನಿಸ್ಥಾನದಿಂದ ಅಲ್‌ ಕಾಯಿದಾವನ್ನು  ತೆರವುಗೊಳಿಸಿದ ಬಳಿಕ, ಓರ್ವ ತರಬೇತಿ ಪಡೆದ ಸರ್ಜನ್‌ ಆಗಿರುವ ಜವಾಹಿರಿಯು, ಪಾಕಿಸ್ಥಾನದ ಬೇಹು ಸಂಸ್ಥೆ ಐಎಸ್‌ಐ ಆಸರೆಯಲ್ಲಿ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ’.

ಅನೇಕ ಅಧಿಕೃತ ಮೂಲಗಳನ್ನು ಆಧರಿಸಿ ತನಗೆ ಈ ಮಾಹಿತಿ ಸಿಕ್ಕಿರುವುದಾಗಿ ನ್ಯೂಸ್‌ ವೀಕ್‌ ಹೇಳಿದೆ. 

2.60 ಕೋಟಿ ಜನಸಂಖ್ಯೆಇರುವ ಅರಬ್ಬೀ ಸಮುದ್ರದ ಬಂದರು ನಗರವಾಗಿರುವ ಕರಾಚಿಯಲ್ಲಿ ಜವಾಹಿರಿ ಬಹುತೇಕ ಅಡಗಿಕೊಂಡಿದ್ದಾನೆ ಎಂದು ನ್ಯೂಸ್‌ ವೀಕ್‌ ವರದಿ ತಿಳಿಸಿದೆ.

ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿರುವ ಜವಾಹಿರಿಯು ಅಡಗಿಕೊಂಡಿರುವ ತಾಣವನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿರುವ, ಕಳೆದ ಹಲವಾರು ವರ್ಷಗಳಲ್ಲಿನ ಮೊತ್ತ ಮೊದಲ ವರದಿ ಇದಾಗಿದೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next