ಶ್ರೀನಗರ/ಇಸ್ಲಾಮಾಬಾದ್: ಕಣಿವೆ ರಾಜ್ಯವು ಬೂದಿ ಮುಚ್ಚಿದ ಕೆಂಡದಂತಿರುವ ಸಂದರ್ಭದಲ್ಲೇ ಕಾಶ್ಮೀರ ವಿಚಾರದಲ್ಲಿ ಮತ್ತೆ ಪಾಕಿಸ್ಥಾನ ಮೂಗು ತೂರಿಸಿದೆ. ರವಿವಾರ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ ಪಾಕ್ ಸೇನಾ ಮುಖ್ಯಸ್ಥ ಜ| ಖಮರ್ ಜಾವೇದ್ ಬಜ್ವಾ ಅವರು, ಕಾಶ್ಮೀರಿಗರ ಹೋರಾಟವನ್ನು ನಾವು ಬೆಂಬಲಿಸುತ್ತೇವೆ ಎಂದು ಘೋಷಿಸಿದ್ದಾರೆ.
ಪಾಕಿಸ್ಥಾನ ಯಾವತ್ತೂ ಕಾಶ್ಮೀರಿಗರ ಹೋರಾಟದಲ್ಲಿ ಅವರ ಜತೆಗಿರುತ್ತದೆ. ಮಾನವ ಹಕ್ಕುಗಳಿಗಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಎಂದೆಂದಿಗೂ ಇದೆ ಎಂದ ಜ| ಬಜ್ವಾ, “ಭಾರತ ಸರಕಾರ ವು ಕಾಶ್ಮೀರದಲ್ಲಿ ಸರ್ಕಾರಿ ಪ್ರಾಯೋಜಕತ್ವದ ಭಯೋತ್ಪಾದನೆ ನಡೆಸುತ್ತಿದೆ’ ಎಂದೂ ಆರೋಪಿಸಿದ್ದಾರೆ.
ಗ್ರೆನೇಡ್ ದಾಳಿಗೆ ವ್ಯಕ್ತಿ ಸಾವು: ಇದೇ ವೇಳೆ, ರವಿವಾರ ಶ್ರೀನಗರದ ಖನ್ಯಾರ್ ಪೊಲೀಸ್ ಠಾಣೆ ಮೇಲೆ ಉಗ್ರರು ಗ್ರೆನೇಡ್ ಎಸೆದ ಪರಿಣಾಮ, ಒಬ್ಬ ನಾಗರಿಕ ಮೃತಪಟ್ಟು, ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಉಗ್ರರು ಎಸೆದ ಗ್ರೆನೇಡ್ ರಸ್ತೆ ಬದಿಯೇ ಸ್ಫೋಟಗೊಂಡ ಕಾರಣ ನಾಗರಿಕ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ-ಪಿಡಿಪಿ ಬಿರುಕು: ಇನ್ನೊಂದೆಡೆ, ಕಾಶ್ಮೀರ ವಿವಾದವು ಬಿಜೆಪಿ-ಪಿಡಿಪಿ ನಡುವೆ ಬಿರುಕು ಮೂಡಿಸಿದೆ.
ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ಸಾಧ್ಯವೇ ಇಲ್ಲ. ನಮಗೆ ಸರಕಾರ ಕ್ಕಿಂತ ದೇಶವೇ ಮೊದಲು ಎಂದು ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಿಎಂ ಮೆಹಬೂಬಾ ಮುಫ್ತಿ ಅವರಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಿಡಿಪಿ ನಾಯಕರು, “ಎಲ್ಲರೊಂದಿಗೆ ಮಾತುಕತೆ ನಡೆಸಿದರಷ್ಟೇ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಪ್ರಧಾನಿ ಮೋದಿ ಅವರು ಜವಾಬ್ದಾರಿಯಿಂದ ನುಣುಚಿಕೊಧಿಳ್ಳುತ್ತಿಧಿದ್ದಾರೆ’ ಎಂದು ಆರೋಪಿಸಿದ್ದಾರೆ.