ಪಾಕಿಸ್ತಾನ: ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ತಂಡವು ಸೂಪರ್ ಓವರ್ನಲ್ಲಿ ಗೆದ್ದು ಬೀಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ತಂಡವು ಸೇನ್ ವಿಲಿಯಮ್ಸನ್ ಅವರ ಅಜೇಯ ಶತಕ (118) ಹಾಗೂ ಬ್ರೆಂಡನ್ ಟೇಲರ್ 56 ರನ್ಗಳ ಜೊತೆಗೆ ಕೊನೆಯಲ್ಲಿ ರಾಜ್ಹಾ 45 ರನ್ಗಳ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 278ರನ್ ಪೇರಿಸಿತು.
ಜಿಂಬಾಬ್ವೆ ನೀಡಿದ 279 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಬಾಬರ್ ಅಜಮ್ (125) ಮನಮೋಹಕ ಶತಕ ಹಾಗೂ ವಹಾಬ್ ರಿಯಾಜ್ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 278 ರನ್ಗಳಿಸಿತು. ಪರಿಣಾಮ ಪಂದ್ಯ ಟೈ ಆಯಿತು..
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಎದುರಾಳಿ ತಂಡದ ಬ್ಲೆಸ್ಸಿಂಗ್ ಮುಜರ್ಬಾನಿ ಬೌಲಿಂಗ್ಗೆ ಮೊದಲೆರಡು ವಿಕೆಟ್ ಕಳೆದುಕೊಂಡು ಕೇವಲ ಎರಡು ರನ್ಗಳಿಸಿತು. ಪರಿಣಾಮ ಮೂರು ರನ್ಗಳ ಸುಲಭ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಜಿಂಬಾಬ್ವೆ, ಮೂರು ಎಸೆತಗಳು ಬಾಕಿ ಇರುವಂತೆಯೇ ರೋಚಕ ಗೆಲುವು ಸಾಧಿಸಿತು.
ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ ಅದಾಗಲೇ ಮೊದಲೆರಡು ಪಂದ್ಯ ಗೆದ್ದು ವಶಪಡಿಸಿಕೊಂಡಿತ್ತು. ಕೊನೆಯ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ರೋಚಕ ಗೆಲುವು ಪಡೆದುಕೊಂಡಿದೆ.