Advertisement

ಪಾಕಿಸ್ಥಾನ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ಲಾಹೋರ್‌ಗೆ ಸ್ಥಳಾಂತರ 

11:07 PM Mar 18, 2022 | Team Udayavani |

ಲಾಹೋರ್‌: ಪಾಕಿಸ್ಥಾನ ಮತ್ತು ಆಸ್ಟ್ರೇಲಿಯ ನಡುವಿನ ಸೀಮಿತ ಓವರ್‌ಗಳ ಸರಣಿಯನ್ನು ರಾವಲ್ಪಿಂಡಿಯಿಂದ ಲಾಹೋರ್‌ಗೆ ಸ್ಥಳಾಂತರಿಸಲಾಗಿದೆ. ರಾಜಕೀಯ ಉದ್ವಿಗ್ನ ಸ್ಥಿತಿಯೇ ಇದಕ್ಕೆ ಕಾರಣ ಎಂದು ಸಚಿವ ಶೇಖ್‌ ರಶೀದ್‌ ಅಹ್ಮದ್‌ ಹೇಳಿದ್ದಾರೆ.

Advertisement

ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಯಾವುದೇ ಕ್ಷಣದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವ ಸಾಧ್ಯತೆ ಇದ್ದು, ಇದರಿಂದ ದೇಶದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ಇದೆ. ರ್ಯಾಲಿಗಳು ನಡೆಯುವ ಸೂಚನೆ ಇದೆ. ಇಸ್ಲಾಮಾಬಾದ್‌ ರಾವಲ್ಪಿಂಡಿಗೆ ಸಮೀಪವೇ ಇದ್ದು, ಕ್ರಿಕೆಟಿಗೆ ಅಡಚಣೆಯಾದೀತೆಂಬ ಮುನ್ನೆಚ್ಚರಿಕೆಯಿಂದ ಸರಣಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next