Advertisement

ಬೂದು ಪಟ್ಟಿಯಿಂದ ಪಾಕಿಸ್ಥಾನ ಹೊರಕ್ಕೆ?

12:21 AM Oct 18, 2022 | Team Udayavani |

ಇಸ್ಲಾಮಾಬಾದ್‌: ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌ (ಎಫ್ಎಟಿಎಫ್)ನ ಬೂದು ಪಟ್ಟಿಯಲ್ಲಿರುವ ಪಾಕಿಸ್ಥಾನ ಇದೇ ವಾರ ಆ ಪಟ್ಟಿಯಿಂದ ಹೊರಗೆ ಬರುವ ಸಾಧ್ಯತೆಯಿದೆ.

Advertisement

ಎಫ್ಎಟಿಎಫ್ ನೀಡಿರುವಂತಹ ಕೆಲಸಗಳನ್ನು ಪಾಕ್‌ ಉತ್ತಮವಾಗಿ ಮಾಡಿದೆ. ಈ ಬಗ್ಗೆ ಅ.20, 21ರಂದು ಸಿಂಗಾಪುರ ನೇತೃತ್ವದಲ್ಲಿ ನಡೆವ ಎಫ್ಎಟಿಎಫ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.

ಅಕ್ರಮ ಹಣ ವರ್ಗಾವಣೆ ತಪ್ಪಿಸಲು ಹಾಗೂ ಉಗ್ರರಿಗೆ ಹಣದ ಹರಿವು ತಪ್ಪಿಸುವಲ್ಲಿ ಕಾನೂನು, ಆರ್ಥಿಕ, ತನಿಖೆ, ಸರಕಾರೇತರ ಸೇರಿ ಹಲವು ವಲಯಗಳಲ್ಲಿ ನ್ಯೂನ್ಯತೆಗಳನ್ನು ಗಮನಿಸಿ ಎಫ್ಎಟಿಎಫ್ ಪಾಕಿಸ್ಥಾನವನ್ನು 2018ರಲ್ಲಿ ಬೂದು ಪಟ್ಟಿಗೆ ಸೇರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next