Advertisement

ಅಮೆರಿಕ ಬಿಟ್ಟು ಹೋದ ಅಸ್ತ್ರಗಳು ಪಾಕ್‌ ಉಗ್ರರ ಕೈಲಿ!

12:10 AM Feb 20, 2022 | Team Udayavani |

ಬಾರಾಮುಲ್ಲ: ಅಫ್ಘಾನಿಸ್ಥಾನ ತೊರೆಯುವ ವೇಳೆ ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಲಕ್ಷಾಂತರ ಸಣ್ಣಸಣ್ಣ ಆಧುನಿಕ ಸೇನಾ ಉಪಕರಣಗಳು; ಈಗ ಭಾರತ-ಪಾಕ್‌ ಗಡಿ ನಿಯಂತ್ರಣ ರೇಖೆಯ ಬಳಿ ಪತ್ತೆಯಾಗಿವೆ ಎಂದು ಜಮ್ಮು-ಕಾಶ್ಮೀರದಲ್ಲಿರುವ ಭಾರತದ ಹಿರಿಯ ಸೇನಾಧಿಕಾರಿ, ಮೇಜರ್‌ ಜನರಲ್‌ ಅಜಯ್‌ ಚಾಂದ್‌ಪುರಿ ತಿಳಿಸಿದ್ದಾರೆ.

Advertisement

ಹಾಗೆಯೇ ಅಫ್ಘಾನಿಸ್ಥಾನದಲ್ಲಿ ಆಶ್ರಯ ಪಡೆದಿದ್ದ ಪಾಕ್‌ ಉಗ್ರರು ಅಲ್ಲಿ ತಾಲಿಬಾನ್‌ ಆಡಳಿತ ಬಂದ ಅನಂತರ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಬಂದು ಸೇರಿಕೊಳ್ಳುತ್ತಿದ್ದಾರೆ. ಇವರು ಭಾರತಕ್ಕೆ ನುಸುಳುವ ಯತ್ನ ಮಾಡು­ತ್ತಿ­ದ್ದಾರೆ. ಕಳೆದ ವರ್ಷ 6 ಬಾರಿ ಭಾರತಕ್ಕೆ ಒಳ ನುಸುಳಲು ಪಾಕ್‌ ಉಗ್ರರು ಯತ್ನಿಸಿದ್ದರು. ಅವರನ್ನು ಹೊಡೆದುರುಳಿಸಲಾಗಿತ್ತು.

ಈ ಸಂದರ್ಭದಲ್ಲಿ ಉಗ್ರರಿಂದ ವಶಪಡಿಸಿ­ಕೊಂಡ ಉಪಕರಣಗಳಲ್ಲಿ ಕೆಲವು ಅಮೆರಿಕ ಸೇನೆಗೆ ಸೇರಿದವಾಗಿವೆ. ಅಂದಾಜಿನ ಪ್ರಕಾರ ಅಮೆರಿಕ ಸೇನೆ ಅಫ್ಘಾನ್‌ನಲ್ಲಿ 6 ಲಕ್ಷ ಶಸ್ತ್ರಾಸ್ತ್ರ ಗಳು, ರಾತ್ರಿನೋಟಕ್ಕೆ ಅನುಕೂಲವಾಗುವ ಲಕ್ಷಾಂತರ ಸಾಧನಗಳನ್ನು ಬಿಟ್ಟು ಹೋಗಿದ್ದಾರೆ. ಇವನ್ನು ಬಳಸಿಕೊಂಡು ಬರುವ ದಿನಗಳಲ್ಲಿ, ಇನ್ನಷ್ಟು ಪಾಕ್‌ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸುವುದು ಖಚಿತ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next