ವಾಷಿಂಗ್ಟನ್ : ಪಾಕಿಸ್ಥಾನದ ನೂತನ ಹಣಕಾಸು ಸಚಿವ ಇಶಾಕ್ ದಾರ್ ಅವರಿಗೆ ಗುರುವಾರ (ಅ13) ವಾಷಿಂಗ್ಟನ್ ಡಿ.ಸಿ.ಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ಥಾನ ಮೂಲ ನಿವಾಸಿಗಳು ಅವಾಚ್ಯವಾಗಿ ನಿಂದಿಸಿ ಘೇರಾವ್ ಹಾಕಿದ ಘಟನೆ ನಡೆದಿದೆ. ಘಟನೆಯ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ : ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲಿ, ನೀವು ನಿಮ್ಮ ಬಿಕಿನಿ ಧರಿಸಿ…; ಓವೈಸಿ
ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಅಮೆರಿಕದಲ್ಲಿರುವ ಕೆಲವು ಪಾಕಿಸ್ಥಾನ ಪ್ರಜೆಗಳು ಆಕ್ರೋಶಗೊಂಡು ಗೇಲಿ ಮಾಡಲು ಪ್ರಾರಂಭಿಸಿತು. “ಚೋರ್, ಚೋರ್ (ಕಳ್ಳ) ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಸಚಿವರ ಸಹಾಯಕರು ಮತ್ತು ಜನಸಮೂಹದ ನಡುವೆ ತೀವ್ರ ವಾಗ್ವಾದವೂ ನಡೆದಿದೆ. ಪ್ರತೀಕಾರವಾಗಿ ಸಚಿವರ ಸಹಾಯಕ ತೀರಾ ಅವಾಚ್ಯ ಶಬ್ದಗಳನ್ನು ಬಳಸಿ ಪ್ರತಿಯಾಗಿ ನಿಂದಿಸಿರುವುದು ವಿಡಿಯೋ ದಲ್ಲಿ ಕಂಡು ಬಂದಿದೆ.
ಪಾಕ್ ರಾಜಕಾರಣಿಯೊಬ್ಬರನ್ನು ವಿದೇಶದಲ್ಲಿ ನಿಂದಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ತಿಂಗಳು ಲಂಡನ್‌ನ ಕಾಫಿ ಶಾಪ್‌ನಲ್ಲಿ ವಾರ್ತಾ ಸಚಿವೆ ಮರಿಯುಮ್ ಔರಂಗಜೇಬ್ ಅವರನ್ನು ಥಳಿಸಲಾಗಿತ್ತು. ಎಪ್ರಿಲ್‌ನಲ್ಲಿ ಸೌದಿ ಅರೇಬಿಯಾದಲ್ಲಿ, ಪಾಕ್ ಯಾತ್ರಾರ್ಥಿಗಳ ಗುಂಪೊಂದು ಮದೀನಾದ ಮಸ್ಜಿದ್-ಇ-ನಬ್ವಿಯಲ್ಲಿ ಪ್ರಧಾನಿ ಶೆಹಬಾಜ್ ಮತ್ತು ಅವರ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿ ಘೋಷಣೆಗಳನ್ನು ಕೂಗಿದ ಘಟನೆಗಳೂ ನಡೆದಿವೆ.