Advertisement

ಕೊನೆಗೂ ಪಾಕಿಸ್ಥಾನಕ್ಕೆ ಐಎಂಎಫ್ ನಿಂದ 6 ಶತಕೋಟಿ ಡಾಲರ್‌ ನೆರವು

09:51 AM May 14, 2019 | |

ಇಸ್ಲಾಮಾಬಾದ್‌ : ಆರ್ಥಿಕ ದೀವಾಳಿ ಅಂಚಿಗೆ ತಲುಪಿರುವ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಯಾ ಪಾಕಿಸ್ಥಾನ್‌, ಕೊನೆಗೂ ಐಎಂಎಫ್ ನಿಂದ 6 ಶತಕೋಟಿ ಡಾಲರ್‌ ನೆರವನ್ನು ಪಡೆಯುವಲ್ಲಿ ಸಫ‌ಲವಾಗಿದೆ.

Advertisement

ಅಪಾರ ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ಥಾನಕ್ಕೆ ಐಎಂಎಫ್ ನ ಈ ಆರು ಶತಕೋಟಿ ಡಾಲರ್‌ ನೆರವು ಮೊತ್ತ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕಂತು ಕಂತಿನಲ್ಲಿ ದೊರಕಲಿದೆ.

ಐಎಂಎಫ್ ನಿಂದ 6 ಶತಕೋಟಿ ಡಾಲರ್‌ ನೆರವು ಸಂಬಂಧ ಸಿಬಂದಿ ಮಟ್ಟದ ಒಪ್ಪಂದ ಸಿದ್ಧವಾಗಿದ್ದು ಅದಕ್ಕೀಕ ವಾಷಿಂಗ್ಟನ್‌ ನಲ್ಲಿರುವ ಐಎಂಎಫ್ ನಿರ್ದೇಶಕರ ಮಂಡಳಿ ಅನುಮೋದನೆ ನೀಡಬೇಕಿದೆ ಎಂದು ಪಾಕ್‌ ಪ್ರಧಾನಿಯ ಹಣಕಾಸು, ಕಂದಾಯ ಮತ್ತು ಆರ್ಥಿಕ ವ್ಯವಹಾರಗಳ ಸಲಹೆಗಾರ ಡಾ. ಅಬ್ದುಲ್‌ ಹಾಫೀಜ್‌ ಹೇಳಿರುವುದನ್ನು ಉಲ್ಲೇಖೀಸಿ ಪಾಕ್‌ ದೈನಿಕ ಡಾನ್‌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next