Advertisement

ಪಾಕ್‌ : ಭದ್ರತಾಪಡೆ ಉಗ್ರರ ನಡುವೆ ಗುಂಡಿನ ದಾಳಿ… 6 ಉಗ್ರರ ಹತ್ಯೆ

08:17 PM Jul 01, 2023 | Team Udayavani |

ಪೇಶಾವರ: ಪಾಕಿಸ್ತಾನದ ಭದ್ರತಾ ಪಡೆಗಳು, ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಎರಡು ಜಿಲ್ಲೆಗಳಲ್ಲಿ 6 ಉಗ್ರರನ್ನು ಹತ್ಯೆ ಮಾಡಿವೆ.

Advertisement

ಪಾಕ್‌ನ ಐಎಸ್‌ಪಿಆರ್‌ ನೀಡಿದ ಮಾಹಿತಿ ಪ್ರಕಾರ, ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿತ್ತು. ಟೈಂಕ್‌ ಜಿಲ್ಲೆಯ ಮಾಂಜಾಯಿ ವಲಯದಲ್ಲಿ ಮೂವರು ಹತರಾಗಿದ್ದಾರೆ. ಇನ್ನು ಉತ್ತರ ವಜಿರಿಸ್ತಾನದ ರಾಜ್ಜ್ಮಾಕ್ ಪ್ರದೇಶದಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ.

ಶೂಟೌಟ್‌ಗೊಳಗಾಗಿರುವ ಉಗ್ರರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಉಗ್ರರು ಉಳಿಯದಂತೆ ನಾಶ ಮಾಡಲು ಭದ್ರತಾಪಡೆಗಳು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸ್ವತಃ ಸೇನೆಯೇ ಕಣಕ್ಕಿಳಿದಿದೆ ಎಂದು ಪಾಕ್‌ ಹೇಳಿಕೊಂಡಿದೆ.

ಇದನ್ನೂ ಓದಿ: ಯುವಕರ ಮೇಲೆ ಹಲ್ಲೆ: ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next