Advertisement
ಅತ್ಯಂತ ಲಜ್ಜೆಗೇಡಿ ಹಾಗೂ ಅನೈತಿಕತೆಯ ಪರಮಾವಧಿ ಕೃತ್ಯದಲ್ಲಿ ಪಾಕ್ ಸೈನಿಕರು ಹತ ಭಾರತೀಯ ಯೋಧರಾದ ಜೆಸಿಓ ನಾಯಿಬ್ ಸುಬೇದಾರ್ ಪರಮ್‌ಜಿತ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪ್ರೇಮ್ ಸಾಗರ್ (ಬಿಎಸ್‌ಎಫ್ 200 ಬೆಟಾಲಿಯನ್‌ನ ಯೋಧ) ಅವರ ಮೃತ ದೇಹಗಳನ್ನು ಛಿದ್ರಛಿದ್ರಗೊಳಿಸಿ ವಿರೂಪಗೊಳಿಸಿದ್ದಾರೆ.
Related Articles
ಪಾಕಿಸ್ಥಾನ ಪುನಃ ಕದನ ವಿರಾಮ ಉಲ್ಲಂಘನೆ ಗೈದು ಗುಂಡಿನ ದಾಳಿ ನಡೆಸಿದ ಕಾರಣ ಇಬ್ಬರು ಭಾರತೀಯ ಜವಾನರು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಅಸುನೀಗಿದ ಘಟನೆ ಇಂದು ಸೋಮವಾರ ಬೆಳಗ್ಗೆ ನಡೆದಿತ್ತು.
Advertisement
ಕೃಷ್ಣಾ ಘಾಟಿ ಪ್ರದೇಶದಲ್ಲಿನ ಮುಂಚೂಣಿ ರಕ್ಷಣಾ ಠಾಣೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಪಡೆಗಳು ರಾಕೆಟ್‌ಗಳನ್ನು ಹಾರಿಸಿದ ಕಾರಣ ಭಾರತೀಯ ಸೇನೆಯ ಓರ್ವ ಜೂನಿಯರ್ ಕಮಿಷನ್‌ಡ್ ಆಫೀಸರ್ ಮತ್ತು ಬಿಎಸ್‌ಎಫ್ನ ಓರ್ವ ಕಾನ್‌ಸ್ಟೆಬಲ್ ಕೊಲ್ಲಲ್ಪಟ್ಟರು . ಇನ್ನೋರ್ವ ಬಿಎಸ್‌ಎಫ್ ಕಾನ್‌ಸ್ಟೆಬಲ್ ಗಾಯಗೊಂಡರು ಎಂದು ಸೇನಾ ಮೂಲಗಳು ತಿಳಿಸಿವೆ.
ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಪಾಕ್ ಪಡೆಗಳು ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ರಾಕೆಟ್ ದಾಳಿ ನಡೆಸಿ ಆಟೋಮ್ಯಾಟಿಕ್ ಶಸ್ತ್ರಾಸ್ತ್ರಗಳಿಂದ ಗುಂಡಿ ಮಳೆಸುರಿಸಿದವು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
ಗಡಿ ರೇಖೆಯಲ್ಲಿ ಕಾವಲು ಕಾಯುತ್ತಿದ್ದ ಭಾರತೀಯ ಸೇನಾ ಪಡೆಗಳು ಪಾಕ್ ಪಡೆಗಳ ಗುಂಡಿಗೆ ತಕ್ಕುದಾದ ಉತ್ತರ ನೀಡಿ ಪಾಕ್ ದಾಳಿಯನ್ನು ಹಿಮ್ಮೆಟ್ಟಿಸಿದವು ಎಂದು ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
ಇಂದು ಪಾಕ್ ಪಡೆಗಳು ನಡೆಸಿರುವ ಕದನ ವಿರಾಮ ಉಲ್ಲಂಘನೆಯ ವೈಖರಿಯನ್ನು ಕಂಡರೆ ಪಾಕ್ ಆಕ್ರಮಿತ ಕಾಶ್ಮೀರದ ಲಾಂಚ್ ಪ್ಯಾಡ್‌ಗಳಲ್ಲಿ ಭಾರತದ ಗಡಿ ದಾಟಿ ಒಳಬರಲು ಭಯೋತ್ಪಾದಕರು ಸಿದ್ಧರಾಗಿ ನಿಂತಿರುವುದು ಸ್ಪಷ್ಟವಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಕಳೆದ ಎಪ್ರಿಲ್ 4, 5 ಹಾಗೂ 8ರಂದು ಪಾಕ್ ಪಡೆಗಳು ಪೂಂಚ್‌ನಲ್ಲಿ ಕದನ ವಿರಾಮ ಉಲ್ಲಂಘನೆಗೈದು ಭಾರೀ ಗುಂಡಿನ ದಾಳಿ ನಡೆಸಿವೆ.