ಕರಾಚಿ: ಕೋವಿಡ್-19ದಿಂದ ತತ್ತರಿಸಿರುವ ಇಂಗ್ಲೆಂಡಿನಲ್ಲಿ ಟೆಸ್ಟ್ ಮತ್ತು ಟಿ20 ಸರಣಿಯನ್ನಾಡಲು ಜುಲೈ ತಿಂಗಳಲ್ಲಿ ಪ್ರವಾಸಗೈಯಲು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಕೊಂಡಿದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಈ ಪ್ರವಾಸಗೈಯಲು ಆಟಗಾರರು ನಿರಾಕರಿಸಿದರೆ ಪಿಸಿಬಿ ಅಂತಹ ಆಟಗಾರರನ್ನು ಬಲವಂತಪ ಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಮೂರು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನು ಒಳಗೊಂಡ ಸರಣಿಯಲ್ಲಿ ಪಾಲ್ಗೊಳ್ಳಲು ಪಾಕಿ ಸ್ಥಾನವು ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಪಿಸಿಬಿ ಮುಖ್ಯ ಕಾರ್ಯ ನಿರ್ವಾಹಕ ವಸೀಮ್ ಖಾನ್ ಹೇಳಿದ್ದಾರೆ.
ಪ್ರವಾಸ ಸಂಬಂಧ ಶುಕ್ರವಾರ ಇಸಿಬಿ ಜತೆ ನಾವು ಬಹಳ ವಿವಿರ ಮತ್ತು ಸಮಗ್ರವಾದ ಚರ್ಚೆ ನಡೆಸಿದ್ದೇವೆ. ಜುಲೈಯಲ್ಲಿ ತನ್ನ ಕ್ರಿಕೆಟ್ ತಂಡವನ್ನು ಇಂಗ್ಲೆಂಡಿಗೆ ಕಳುಹಿಸಲು ಪಿಸಿಬಿ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಖಾನ್ ವಿವರಿಸಿದರು.
ವೀಡಿಯೊ ಲಿಂಕ್ ಮೂಲಕ ನಡೆದ ಚರ್ಚೆಯ ವೇಳೆ ಹೋಟೆಲ್ ಒಳಗೊಂಡಿರುವ ಮೈದಾನ ಗಳಲ್ಲಿ ಎಲ್ಲ ಬಾಗಿಲುಗಳನ್ನು ಮುಚ್ಚಿ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಯಿತು. ಆದರೆ ಈ ಪ್ರವಾಸಗೈಯಲು ಆಟಗಾರರನ್ನು ಬಲವಂತಪಡಿಸುವುದಿಲ್ಲವೆಂದು ಪಿಸಿಬಿ ಸ್ಪಷ್ಟಪಡಿಸಿದೆ. ಒಂದು ವೇಳೆ ಆಟಗಾರರು ಒಪ್ಪಿಕೊಂಡರೆ ತಂಡವನ್ನು ಕಳುಹಿಸಲಾಗುವುದು ಎಂದು ಖಾನ್ ತಿಳಿಸಿದರು.
ಒಂದು ವೇಳೆ ಆಟಗಾರ ಪ್ರವಾಸಗೈ ಯಲು ಬಯಸದಿದ್ದರೆ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಈ ಸಂಬಂಧ ಯಾವುದೇ ಶಿಸ್ತುಕ್ರಮ ಜರಗಿಸುವುದಿಲ್ಲ ಎಂದವರು ಸ್ಪಷ್ಟಪಡಿಸಿದರು. ಪ್ರವಾಸಗೈಯಲು ಆಸಕ್ತ ಆಟಗಾರರು ಪಿಸಿಬಿಯನ್ನು ಸಂಪರ್ಕಿಸಬಹುದು. 25 ಆಟಗಾರರು ಇಂಗ್ಲೆಂಡಿಗೆ ಪ್ರವಾಸಗೈಯಲಿದ್ದಾರೆ ಮತ್ತು ಮೊದಲಿಗೆ ಅವರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗುವುದು ಎಂದು ಖಾನ್ ವಿವರಿಸಿದರು.