Advertisement

ಪಾಕ್‌ ವನಿತಾ ತಂಡಕ್ಕೆ ಕೋವಿಡ್ ಕಾಟ

08:59 PM Oct 28, 2021 | Team Udayavani |

ಕರಾಚಿ: ಪಾಕಿಸ್ಥಾನದ ವನಿತಾ ಕ್ರಿಕೆಟ್‌ ತಂಡದ ಮೂವರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಆದರೆ ಪಿಸಿಬಿ ಇವರ ಹೆಸರನ್ನು ಬಹಿರಂಗಗೊಳಿಸಿಲ್ಲ.

Advertisement

ಇವರು ನ. 6ರ ತನಕ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಹಾಗೆಯೇ ತಂಡದ ಉಳಿದ ಆಟಗಾರ್ತಿಯರಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ನ.2ರ ತನಕ ಐಸೊಲೇಶನ್‌ನಲ್ಲಿ ಇರಿಸಲು ನಿರ್ಧರಿಸಲಾಗಿದೆ.

ಮುಂಬರುವ ವೆಸ್ಟ್‌ ಇಂಡೀಸ್‌ ಎದುರಿನ ಸರಣಿಗಾಗಿ ಇಲ್ಲಿನ “ಹನೀಫ್‌ ಮೊಹಮ್ಮದ್‌ ಹೈ ಪರ್ಫಾರ್ಮೆನ್ಸ್‌ ಸೆಂಟರ್‌’ನಲ್ಲಿ ನಡೆಯುತ್ತಿದ್ದ ಶಿಬಿರದಲ್ಲಿ ಪಾಕ್‌ ಆಟಗಾರ್ತಿಯರು ಅಭ್ಯಾಸ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next