Advertisement

18 ವರ್ಷಗಳ ಬಳಿಕ ಪಾಕ್‌ ನೆಲದಲ್ಲಿ ಕಿವೀಸ್‌ ಏಕದಿನ

09:40 PM Sep 16, 2021 | Team Udayavani |

ರಾವಲ್ಪಿಂಡಿ: ಶುಕ್ರವಾರ ಇಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ಪ್ರವಾಸಿ ನ್ಯೂಜಿಲೆಂಡ್‌ ತಂಡಗಳ ನಡುವೆ ಸರಣಿಯ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದರೊಂದಿಗೆ ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್‌ ತಂಡ ಪಾಕ್‌ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಲಿದೆ. 2003ರಲ್ಲಿ ಇತ್ತಂಡಗಳ ನಡುವೆ ಇಲ್ಲಿ ಕೊನೆಯ ಪಂದ್ಯ ನಡೆದಿತ್ತು.

Advertisement

ಪಾಕಿಸ್ತಾನ-ನ್ಯೂಜಿಲೆಂಡ್‌ ಕೊನೆಯ ಸಲ ಏಕದಿನ ಪಂದ್ಯದಲ್ಲಿ ಎದುರಾದದ್ದು 2019ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಬರ್‌ ಅಜಂ ಅವರ ಶತಕ ಪರಾಕ್ರಮದಿಂದ ಪಾಕ್‌ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಸಲವೂ ಬಾಬರ್‌ ಅಜಂ ಅವರೇ ಪಾಕ್‌ ತಂಡವನ್ನು ಮುನ್ನಡೆಸಲಿದ್ದಾರೆ. ನ್ಯೂಜಿಲೆಂಡಿನ ತಾರಾ ಆಟಗಾರರನೇಕರು ಈ ಪ್ರವಾಸದಿಂದ ಹಿಂದೆ ಸರಿದಿದ್ದು, ಟಾಮ್‌ ಲ್ಯಾಥಂ ತಂಡದ ನೇತೃತ್ವ ವಹಿಸಿದ್ದಾರೆ.

1976-2003ರ ನಡುವೆ ಪಾಕ್‌ ನೆಲದಲ್ಲಿ ಇತ್ತಂಡಗಳು 19 ಏಕದಿನ ಪಂದ್ಯಗಳನ್ನಾಡಿವೆ. ಪಾಕಿಸ್ಥಾನ 19 ಗೆಲುವಿನ ದಾಖಲೆ ಹೊಂದಿದೆ. ರಾವಲ್ಪಿಂಡಿಯಲ್ಲಿ ನಡೆದ ಮೂರೂ ಪಂದ್ಯಗಳಲ್ಲಿ ಪಾಕ್‌ ಜಯ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next