Advertisement

ಎಫ್ಎಟಿಎಫ್ 6 ಕಟ್ಟಾಜ್ಞೆ ಪಾಲಿಸದ ಪಾಕ್‌

01:31 AM Oct 19, 2020 | mahesh |

ಹೊಸದಿಲ್ಲಿ: ಉಗ್ರರಿಗೆ ಆರ್ಥಿಕ ನೆರವು ನೀಡಿ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ಥಾನಕ್ಕೆ ಈ ಬಾರಿಯೂ “ಬೂದು ಪಟ್ಟಿ’ ಭೂತ ಬೆನ್ನೇರುವ ಸಾಧ್ಯತೆಯಿದೆ. ಮಸೂದ್‌ ಅಜರ್‌, ಹಫೀಜ್‌ ಸಯೀದ್‌ ವಿರುದ್ಧ ಕ್ರಮ ಸೇರಿದಂತೆ ಎಫ್ಎಟಿಎಫ್ ಸೂಚಿಸಿದ್ದ 6 ಕಟ್ಟಾಜ್ಞೆಗಳನ್ನು ಪಾಕ್‌ ಇನ್ನೂ ಪೂರೈಸಿಲ್ಲ!

Advertisement

ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಣಿಡುವ ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಅ.21-23 ರವರೆಗೆ ಸಭೆ ಸೇರಲಿದೆ. ಆದರೆ, ಈ ಒಂದು ವರ್ಷದಲ್ಲಿ ಎಫ್ಎಟಿಎಫ್ ಹೇಳಿದ್ದ ಪ್ರಮುಖ 6 ಸೂಚನೆಗಳನ್ನು ಪಾಲಿಸದೇ ಇರುವುದು ಸ್ವತಃ ಪಾಕ್‌ಗೆ ಮುಳುವಾಗಲಿದೆ.

ಉಗ್ರರ ನಿಯಂತ್ರಣಕ್ಕೆ ಎಫ್ಎಟಿಎಫ್ ಒಟ್ಟು 27 ಟಾಸ್ಕ್ಗಳನ್ನು ನೀಡಿತ್ತು. ಇವುಗಳಲ್ಲಿ 21 ಮಾತ್ರವೇ ಇಸ್ಲಾಮಾಬಾದ್‌ ಪೂರೈಸಿದೆ. ಜೆಇಎಂ ಮುಖ್ಯಸ್ಥ ಅಜರ್‌, ಎಲ್‌ಇಟಿ ಸಂಸ್ಥಾಪಕ ಹಫೀಜ್‌, ಪ್ರಮುಖ ಉಗ್ರ ಕಮಾಂ ಡರ್‌ ಝಾಕೀರ್‌ ರೆಹಮಾನ್‌ ಲಖೀÌ ವಿರುದ್ಧ ಇಮ್ರಾನ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆ ನಿಯಂತ್ರಣ ಕಾನೂನಿನಡಿಯಲ್ಲಿ ನಿಷೇಧಕ್ಕೊಳಗಾಗಿದ್ದ 7,600 ಉಗ್ರರ ಪಟ್ಟಿಯಲ್ಲಿ 4 ಸಾವಿರಕ್ಕೂ ಅಧಿಕ ಹೆಸರನ್ನು ಕೈಬಿಟ್ಟಿರುವುದು ಪಾಕ್‌ಗೆ ಅತಿದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ.

ಎಫ್ಎಟಿಎಫ್ ನ  39 ಸದಸ್ಯ ರಾಷ್ಟ್ರಗಳ ಪೈಕಿ 12 ರಾಷ್ಟ್ರಗಳ ಬೆಂಬಲ ಪಡೆದರಷ್ಟೇ ಪಾಕ್ ‌ಬೂದುಪಟ್ಟಿಯಿಂದ ಹೊರಬರಲಿದೆ. ಆದರೆ ಪಾಕಿಸ್ಥಾನವನ್ನು ಟರ್ಕಿ, ಚೀನ, ಮಲೇಷ್ಯಾ ಮಾತ್ರವೇ ಬೆಂಬಲಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next