Advertisement
ಕೆನಡಾದಲ್ಲಿ ವಿದೇಶಿ ಶಕ್ತಿಗಳ ಕೈವಾಡದ ಬಗ್ಗೆ ಸೆ. 27ರಂದು ನಡೆದ ಸಭೆಯಲ್ಲಿ ಅಲ್ಲಿನ ಗುಪ್ತಚರ ಸಂಸ್ಥೆಯ ಮುಖ್ಯಸ್ಥೆ ವೆನೆಸಾ ಲಾಯ್ಡ ಸ್ವತಃ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕೆನಡಾದಲ್ಲಿ ಭಾರತದ ಪ್ರಭಾವವನ್ನು ತಗ್ಗಿಸಲು ಪಾಕಿಸ್ಥಾನವು ಸಂಪೂರ್ಣವಾಗಿ ಖಲಿ ಸ್ಥಾನಿ ಉಗ್ರವಾದವನ್ನು ಬೆಂಬಲಿಸುತ್ತಿದೆ ಎಂದು ಹೇಳಿದ್ದರು.
ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ನಡೆಸುತ್ತಿರುವ ತನಿಖೆಗೆ ಭಾರತ ಸಹಕಾರ ನೀಡಬೇಕು ಎಂದು ಅಮೆರಿಕ ಹಾಗೂ ಬ್ರಿಟನ್ ಬುಧವಾರ ಹೇಳಿವೆ. ಈ ಪ್ರಕರಣದ ತನಿಖೆಯ ಬಗ್ಗೆ ಮಿತ್ರರಾಷ್ಟ್ರಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಹೇಳಿದ ಒಂದು ದಿನದ ಬಳಿಕ 2 ದೇಶಗಳು ಈ ಹೇಳಿಕೆ ಬಿಡುಗಡೆ ಮಾಡಿವೆ.
Related Articles
ಕೆನಡಾದಲ್ಲಿ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಭಾರತದ ಮೇಲೆ ಕಠಿನ ನಿರ್ಬಂಧಗಳನ್ನು ವಿಧಿಸಬೇಕು ಎಂದು ಕೆನಡಾದ ಸಿಕ್ಖ್ ನಾಯಕ ಜಗಮೀತ್ ಸಿಂಗ್ ಹೇಳಿದ್ದಾರೆ. ಆರೆಸ್ಸೆಸ್ ಭಾರತದ ಉಗ್ರ ಸಂಘಟನೆ ಎಂದೂ ಕರೆದಿದ್ದಾರೆ.
Advertisement