Advertisement
ಬುಧವಾರ ಶೃಂಗ ಆರಂಭವಾಗಲಿದ್ದು, ಮಂಗಳವಾರ ರಾತ್ರಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಆಯೋಜಿಸಿರುವ ಔತಣಕೂಟದಲ್ಲಿ ಜೈಶಂಕರ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಶೃಂಗದಲ್ಲಿ ಭಾಗಿಯಾದರೂ ಭಾರತ-ಪಾಕ್ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ಈಗಾಗಲೇ ಅವರು ಸ್ಪಷ್ಟ ಪಡಿಸಿದ್ದಾರೆ. ಪಾಕ್ ವಿದೇಶಾಂಗ ಇಲಾಖೆ ಕೂಡ, “ಜೈಶಂಕರ್ ಅವರು ಇಲ್ಲಿ ಬಹುಪಕ್ಷೀಯ ಸಭೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ. ಭಾರತ-ಪಾಕ್ ಸಂಬಂಧದ ಬಗ್ಗೆ ಮಾತನಾಡಲು ಅಲ್ಲ’ ಎಂದಿದೆ.
ಶೃಂಗದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಇಸ್ಲಾಮಾಬಾದ್ನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 2 ದಿನ ಲಾಕ್ಡೌನ್ ಮಾಡಲಾಗಿದೆ. ಶಾಲಾ-ಕಾಲೇಜು, ರೆಸ್ಟೋರೆಂಟ್ ಸೇರಿ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. 12ರಿಂದ 16ರವರೆಗೆ ಮದುವೆ ಹಾಲ್ಗಳು, ಕೆಫೆ, ಸ್ನೂಕರ್ ಕ್ಲಬ್ಗಳಿಗೆ ನಿರ್ಬಂಧ ಹೇರಲಾಗಿದೆ. ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ 14ರಿಂದ 16ರವ ರೆಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಹೆಚ್ಚುವರಿ ಭದ್ರತೆಗೆಂದು ಎರಡೂ ನಗರಗಳಲ್ಲಿ 10,000 ಯೋಧರನ್ನು ನಿಯೋಜಿಸಲಾಗಿದೆ. ರಾವಲ್ಪಿಂಡಿ, ಇಸ್ಲಾ ಮಾಬಾದ್ನ ಭದ್ರತೆಯನ್ನು ಸಂಪೂರ್ಣವಾಗಿ ಸೇನೆಗೆ ಹಸ್ತಾಂತರಿಸಲಾಗಿದೆ.