Advertisement

Pakistan-England Test: ಇಂಗ್ಲೆಂಡ್‌ ತಂಡಕ್ಕೆ ಮರಳಿದ ಬೆನ್‌ ಸ್ಟೋಕ್ಸ್‌

12:43 AM Oct 15, 2024 | Team Udayavani |

ಮುಲ್ತಾನ್‌: ಪಾಕಿಸ್ಥಾನ ವಿರುದ್ಧ ಮಂಗಳವಾರದಿಂದ ಆರಂಭವಾಗುವ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ತಂಡಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅವರು ಪಂದ್ಯವನ್ನಾಡಲು ಕ್ಷಮತೆ ಹೊಂದಿದ್ದಾರೆಂದು ಈ ಮೊದಲು ಘೋಷಿಸಲಾಗಿತ್ತು.

Advertisement

ಮೊದಲ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಮತ್ತು 47 ರನ್ನುಗಳಿಂದ ಜಯಿಸಿದ್ದ ಇಂಗ್ಲೆಂಡ್‌ ತಂಡವು ದ್ವಿತೀಯ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿದೆ. ಸ್ಟೋಕ್ಸ್‌ ತಂಡಕ್ಕೆ ಮರಳಿದ್ದರೆ ವೇಗಿ ಮ್ಯಾಥ್ಯೂ ಪಾಟ್ಸ್‌ ಅವರನ್ನು ಗಸ್‌ ಅಟ್ಕಿನ್ಸನ್‌ ಬದಲಿಗೆ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಸ್ಟೋಕ್ಸ್‌ ಅವರಿಗಾಗಿ ಕ್ರಿಸ್‌ ವೋಕ್ಸ್‌ ತಂಡದಿಂದ ಹೊರಗುಳಿದಿದ್ದಾರೆ.

ತಂಡವು ಇಬ್ಬರು ಸ್ಪಿನ್ನರ್‌ಗಳಾದ ಶೋಯಿಬ್‌ ಬಶೀರ್‌ ಮತ್ತು ಜಾಕ್‌ ಲೀಚ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಪಾಕಿಸ್ಥಾನ ಇನ್ನೂ ತನ್ನ ಆಟವಾಡುವ ಬಳಗವನ್ನು ಪ್ರಕಟಿಸಿಲ್ಲ. ಆಯ್ಕೆಗಾರರು ರವಿವಾರ ಕೊನೆಯ ಎರಡು ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸಿದ್ದು ಹಲವು ಆಟಗಾರರಿಗೆ ವಿಶ್ರಾಂತಿ ನೀಡಿದ್ದರು.

ಇಂಗ್ಲೆಂಡ್‌ ತಂಡ: ಬೆನ್‌ ಸ್ಟೋಕ್ಸ್‌ (ನಾಯಕ), ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಒಲಿ ಪೋಪ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಜಮೀ ಸ್ಮಿತ್‌, ಬ್ರೈಡನ್‌ ಕಾರ್ಸ್‌, ಮ್ಯಾಥ್ಯೂ ಪಾಟ್ಸ್‌, ಜಾಕ್‌ ಲೀಚ್‌, ಶೋಯಿಬ್‌ ಬಶೀರ್‌.

Advertisement

Udayavani is now on Telegram. Click here to join our channel and stay updated with the latest news.

Next