Advertisement

BJPಗೆ ಪಾಕ್‌ ಕಂಪೆನಿ ದೇಣಿಗೆ: ನಿಜಾಂಶ ಏನು? ಸ್ಯಾಂಟಿಯಾಗೋ ಮಾರ್ಟಿನ್‌ ಯಾರು?

12:34 AM Mar 16, 2024 | Team Udayavani |

ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಚುನಾವಣ ಬಾಂಡ್‌ ಖರೀದಿಸಿದವರ ಪಟ್ಟಿಯಲ್ಲಿ ಸ್ಯಾಂಟಿಯಾಗೋ ಮಾರ್ಟಿನ್‌ ಮೊದಲ ಸ್ಥಾನದಲ್ಲಿದ್ದಾರೆ. ಲಾಟರಿ ಕಿಂಗ್‌ ಎಂದೇ ಹೆಸರಾಗಿರುವ ಮಾರ್ಟಿನ್‌ ಅವರ ಫ್ಯೂಚರ್‌ ಗೇಮ್ಸ್‌ ಆ್ಯಂಡ್‌ ಹೋಟೆಲ್‌ ಸರ್ವೀಸಸ್‌ ಕಂಪೆನಿಯು 1368 ಕೋಟಿ ರೂ. ಮೊತ್ತದ ಬಾಂಡ್‌ ಖರೀದಿಸಿದೆ. ತಮಿಳುನಾಡು ಕೊಯಮತ್ತೂರು ಮೂಲದ ಮಾರ್ಟಿನ್‌ ಒಂದು ಕಾಲದಲ್ಲಿ ಕಾರ್ಮಿಕನಾಗಿದ್ದು, ಇಂದು ಅತೀದೊಡ್ಡ ಲಾಟರಿ ಬಿಸಿನೆಸ್‌ ಹೊಂದಿದ್ದಾನೆ. ಇ.ಡಿ, ಸಿಬಿಐ ಮತ್ತು ಐಟಿ ಇಲಾಖೆಗಳ ನಿರಂತರ ನಿಗಾದಲ್ಲಿ ಮಾರ್ಟಿನ್‌ ಇದ್ದಾರೆ. 2023ರಲ್ಲಿ ಇ.ಡಿ. ಮಾರ್ಟಿನ್‌ ಕಂಪೆನಿಗೆ ಸೇರಿದ 457 ಕೋ. ರೂ. ಆಸ್ತಿ ಜಪ್ತಿ ಮಾಡಿತ್ತು. ಫ್ಯೂಚರ್‌ ಗೇಮಿಂಗ್‌ ಕಂಪೆನಿಯಿಂದ ಕೇರಳದಲ್ಲಿ ಮೋಸದ ಲಾಟರಿ ಮಾರಾಟದಿಂದ ತಮಗೆ 900 ಕೋಟಿ ರೂ. ನಷ್ಟವಾಗಿದೆ ಎಂದು ಸಿಕ್ಕಿಂ ಸರಕಾರ ಆರೋಪಿಸಿತ್ತು.

Advertisement

ಬಿಜೆಪಿಗೆ ಪಾಕ್‌ ಕಂಪೆನಿ ದೇಣಿಗೆ: ನಿಜಾಂಶ ಏನು?
ಪಾಕಿಸ್ಥಾನ ಮೂಲದ “ಹಬ್‌ ಪವರ್‌ ಕಂಪನಿ’ಯು ಪುಲ್ವಾಮಾ ದಾಳಿಯ ಬಳಿಕ ಬಿಜೆಪಿಗೆ 95 ಲಕ್ಷ ರೂ. ದೇಣಿಗೆ ನೀಡಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಮಾಜವಾದಿ ಪಾರ್ಟಿ ಕೂಡ ಟ್ವೀಟ್‌ ಮಾಡಿ, ಬಿಜೆಪಿ ವಿರುದ್ಧ ಕೆಂಡಕಾರಿದೆ. ಆದರೆ, ಪಾಕಿಸ್ಥಾನದ ದಿ ಹಬ್‌ ಪವರ್‌ ಕಂಪೆನಿ ಲಿ.(ಎಚ್‌ಯುಬಿಸಿಒ) ಸ್ಪಷ್ಟನೆ ನೀಡಿ, “”ಭಾರತದಲ್ಲಿ ತಮ್ಮ ಯಾವುದೇ ಕಂಪೆನಿ ಇಲ್ಲ ಅಥವಾ ಯಾವುದೇ ಭಾರತೀಯ ಕಂಪೆನಿಯ ಜತೆ ಸಂಬಂಧ ಹೊಂದಿಲ್ಲ. ಎಚ್‌ಯುಬಿಸಿಒ ದೇಣಿಗೆ ನೀಡಿದ ಮಾಹಿತಿಗೂ ತಮ್ಮ ಕಂಪೆನಿಗೂ ಯಾವುದೇ ಸಂಬಂಧವಿಲ್ಲ ” ಎಂದು ಹೇಳಿದೆ.

ಕಂಪೆನಿಗಳ ದೇಣಿಗೆಗೂ, ಇಡಿ, ಐಟಿ ದಾಳಿಗೂ ಸಂಬಂಧವಿಲ್ಲ: ನಿರ್ಮಲಾ

ಆಡಳಿತ ಪಕ್ಷಕ್ಕೆ ಕಂಪೆನಿಗಳ ದೇಣಿಗೆಗೂ ಮತ್ತು ಇ.ಡಿ. ದಾಳಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

“ಕಂಪೆನಿಗಳು ಹಣ ಕೊಟ್ಟ ಮೇಲೂ ತನಿಖಾ ಸಂಸ್ಥೆಗಳು ಅಂಥ ಕಂಪೆನಿಗಳ ವಿರುದ್ಧ ತನಿಖೆಯನ್ನು ಕೈಗೊಂಡಿರಬಹುದಲ್ಲ? ಹಾಗಾಗಿ, ಇ.ಡಿ. ತನಿಖೆ ಕೈಗೊಂಡ ಬಳಿಕ ಅಂಥ ಕಂಪೆನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂಬುದು ಕೇವಲ ಊಹೆ. ಕಂಪೆನಿಗಳು ಪ್ರಾದೇಶಿಕ ಪಕ್ಷಗಳಿಗೂ ದೇಣಿಗೆ ನೀಡಿರುವ ಸಾಧ್ಯತೆಯೂ ಇದೆ ಅಲ್ಲವೇ?” ಎಂದು ನಿರ್ಮಲಾ ಸೀತಾರಾಮನ್‌ ಅವರು ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದರು.

Advertisement

ರಾಜಕೀಯ ಪಕ್ಷಗಳಿಗೆ ನಿಧಿ ಒದಗಿಸುವ ಚುನಾವಣ ಬಾಂಡ್‌ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್‌ ಅಸಾಂವಿಧಾನಿಕ ಎಂದು ಹೇಳಿರುವುದು, ನಿಧಿ ಸಂಗ್ರಹಕ್ಕೆ ಸಂಬಂಧಿಸಿದ ಸುಧಾರಣೆಯೇ ಆಗಿದೆ. ಆದರೆ, ಅದೇ ಜಾಗದಲ್ಲಿ ಮತ್ತೂಂದು ಹೆಚ್ಚು ಪಾರದರ್ಶಕವಾದ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಹೇಳಿದ್ದಾರೆ. ಜತೆಗೆ, ಚುನಾವಣ ಬಾಂಡ್‌ ಗಳ ಮೂಲಕ ರಾಜ ಕೀಯ ಪಕ್ಷ ಗಳಿಗೆ ತಲು ಪುವ ಹಣವು “ವೈಟ್‌ ಮನಿ’ಯಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ.

ಲಾಭ ಬಂದಿದ್ದು 21 ಕೋಟಿ ರೂ., ಆದರೆ ಖರೀದಿಸಿದ್ದು 360 ಕೋಟಿ ರೂ. ಬಾಂಡ್‌!
3ನೇ ಅತೀ ಹೆಚ್ಚು ದೇಣಿಗೆ ನೀಡಿದ ಕ್ವಿಕ್‌ ಸಪ್ಲೈ ನ್‌ ಕಂಪೆನಿ

ಕ್ವಿಕ್‌ ಸಪ್ಲೈ ಚೈನ್‌ ಖಾಸಗಿ ಕಂಪೆನಿಯು, ಪಕ್ಷಗಳಿಗೆ ದೇಣಿಗೆ ನೀಡಿದ 3ನೇ ಅತೀ ದೊಡ್ಡ ಕಂಪೆನಿಯಾಗಿದೆ. 2021-22 ಮತ್ತು 2023-24ರ ಸಾಲಿನಲ್ಲಿ ಈ ಕಂಪೆನಿಯು ಒಟ್ಟು 410 ಕೋಟಿ ರೂ. ಮೊತ್ತದ ಚುನಾವಣ ಬಾಂಡ್‌ ಖರೀದಿಸಿದೆ. ಇದು ಗೋದಾಮು ಮತ್ತು ಸಂಗ್ರಹ ಘಟಕಗಳ ನಿರ್ಮಾಣ ಕಂಪೆನಿ. 2000ರಲ್ಲಿ ಆರಂಭವಾಗಿರುವ ಕಂಪೆನಿ, 130.99 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಷೇರುದಾರರಿಂದ 129 ಕೋಟಿ ರೂ. ಸಂಗ್ರಹಿಸಿದೆ. 2022-23ರ ಸಾಲಿನಲ್ಲಿ ಕಂಪೆನಿಯು ಕೇವಲ 500 ಕೋಟಿ ರೂ. ಆದಾಯ ಗಳಿಸಿದೆ. 2021-22ರ ಸಾಲಿನಲ್ಲಿ ಕಂಪೆನಿಯ ಲಾಭ 21.72 ಕೋಟಿ ರೂ. ಇದ್ದರೂ, ಆ ವರ್ಷ ಕಂಪೆನಿಯು ಚುನಾ ವಣ ಬಾಂಡ್‌ ರೂಪ ದಲ್ಲಿ ನೀಡಿದ ದೇಣಿ ಗೆಯ ಮೊತ್ತ ಬರೋ ಬ್ಬರಿ 360 ಕೋಟಿ ರೂ.! 2023-24ರ ವಿತ್ತ ವರ್ಷದಲ್ಲಿ ಮತ್ತೆ 50 ಕೋಟಿ ರೂ. ಬಾಂಡ್‌ ಖರೀದಿಸಿದೆ. ಇನ್ನೂ ಆಶ್ಚರ್ಯ ಎಂದರೆ, ಈ ಕಂಪೆನಿಗೆ ದೀರ್ಘ‌ ಅವಧಿಗೆ ನಿರ್ದೇಶಕರಾಗಿರುವ ತಪಸ್‌ ಮಿತ್ರ ಅವರು ಇನ್ನೂ ಇದೇ ರೀತಿಯ 25 ಕಂಪೆನಿಗಳಿಗೆ ನಿರ್ದೇಶಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next