Advertisement
ಜು. 28 ರಂದು ಸಂಜೆ ಸಾಂತಾ ಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿ ಪ್ರಥಮ ಬಾರಿಗೆ ಮುಂಬಯಿಗೆ ಆಗಮಿಸಿದ ಯತಿಕುಲ ಚಕ್ರವರ್ತಿ ಪೇಜಾವರ ಸ್ವಾಮಿಗಳ ಅಭಿವಂದನಾ ಸಮಿತಿ ಪೇಜಾವರ ಮಠ ಮುಂಬಯಿ ಮತ್ತು ನಗರದ ತುಳು ಕನ್ನಡಿಗ ಸಂಘ ಸಂಸ್ಥೆಗಳು ಆಯೋಜಿಸಿದ ಅಭಿನಂದನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾನಾಡಿ ಶುಭಹಾರೈಸಿದರು.
Related Articles
Advertisement
ಸತ್ಯಧ್ಯಾನ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್ ವಿದ್ಯಾ ಸಿಂಹಾ ಚಾರ್ಯ ಅಭಿವಂದನಾ ನುಡಿಗಳನ್ನಾಡಿ, ಮನುಷ್ಯನಿಗೆ ಆಧ್ಯಾತ್ಮಿಕ ಬಲದ ಸಂಪತ್ತಿನ ಅಗತ್ಯ ವಿದೆ. ಸಾತ್ವಿಕವಾದ ಕಾರ್ಯದಲ್ಲಿ ತಮ್ಮ ಶಕ್ತಿಯನ್ನು ಒಲಿಸುವುದು ಶ್ರೀಗಳ ಪರಮ ಕರ್ತವ್ಯವಾಗಿದೆ. ಅವರಲ್ಲಿನ ಹರೆಯದ ಉತ್ಸಾಹ ಈಗಲೂ, ಈಗೀನ ಉತ್ಸಾಹ ಆಗಲೂ ಉಳಿಸಿಕೊಂಡಿ ದ್ದಾರೆ. ಹೇಗೆ ವಾದಿರಾಜರು 125 ವರ್ಷಗಳನ್ನು ಸಂಪನ್ನಗೊಳಿಸಿದರೋ, ಹಾಗೆಯೇ ವಿಶ್ವೇಶತೀರ್ಥರೂ ಆಯು ರಾರೋಗ್ಯವಾಗಿ ಸುದೀರ್ಘ ಆಯುಷ್ಯ ಕಾಣುವಂತಾಗಲಿ. ಶ್ರೀಗಳ ಮಾರ್ಗದರ್ಶನ ಭಕ್ತಾದಿಗಳಿಗೆ ಅನುಕೂಲಕರ ಮತ್ತು ಹಿತವಾಗಿರಲಿ. ಅಖಂಡ ಹಿಂದೂ ಸಮಾಜಕ್ಕೆ, ಹಿಂದೂ ಹೃದಯ ಸಾಮ್ರಾಟ ಗುರುವಾಗಿರಲಿ ಎಂದು ಶುಭಹಾರೈಸಿದರು.
ಸ್ಥಳೀಯ ಬಿಲ್ಲವರ ಭವನ ದಿಂದ ಶ್ರೀಗಳನ್ನು ಭವ್ಯ ಶೋಭಾಯಾತ್ರೆಯಲ್ಲಿ ಮಠಕ್ಕೆ ಭಕ್ತಿಪೂರ್ವಕ ವಾಗಿ ಬರಮಾಡಿಕೊಳ್ಳಲಾಯಿತು. ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಸ್ವಾಗತ ಗೋಪುರಕ್ಕೆ ಶ್ರೀಗಳು ಭೂಮಿಪೂಜೆ ನೆರವೇರಿಸಿ ಬಳಿಕ ಗೋವರ್ಧನಾ ಮೆಡಿಕಲ್ ರಿಸರ್ಚ್ ಕೇಂದ್ರವನ್ನು ಉದ್ಘಾಟಿಸಿದರು. ಭವ್ಯ ಸಮಾರಂಭದಲ್ಲಿ ಕೈರಬೆಟ್ಟು ವಿಶ್ವನಾಥ ಭಟ್, ಕೃಷ್ಣರಾಜ ತಂತ್ರಿ ಅತಿಥಿಗಳನ್ನು ಗೌರವಿಸಿದರು. ಶಾಖೆಯ ಪ್ರಬಂಧಕ ರಾದ ಹರಿ ಭಟ್, ನಿರಂಜನ್ ಗೋಗೆr, ವಿದ್ವಾಂಸರು. ಪುರೋಹಿತರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ. ಎಸ್. ರಾವ್ ಸ್ವಾಗತಿಸಿದರು. ಆನಂದತೀರ್ಥ ವಿದ್ಯಾಪೀಠ ಮುಂಬಯಿ ಕುಲಪತಿ ವಿದ್ವಾನ್ ನಾಗರಹಳ್ಳಿ ಪ್ರಹ್ಲಾದ್ ಆಚಾರ್ಯ ಪ್ರಸ್ತಾವನೆಗೈದರು.
ಶಾಖೆಯ ಪ್ರಬಂಧಕ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಅತಿಥಿ, ಮಹಾನ್ ದಾನಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಆಚಾರ್ಯ ರಾಮಕುಂಜ ವಂದಿಸಿದರು.
ಮುಂಬಯಿ ಭಾರತೀಯರ ಆತ್ಮವಾಗಿದೆ. ಇದು ನೂರಾರು ಸಂತರನ್ನು, ವಿದ್ವಾಂಸರು, ಧುರೀಣರು ಕಂಡ ಭೂಮಿ. ನಾನು ಯತಿಕುಲ ಚಕ್ರವರ್ತಿ ಎಂದು ಹೇಳುವಷ್ಟು ಸಾಧಕನಲ್ಲ. ಬರೀ ಭಗವಂತನ ಸೇವಕನಾಗಿದ್ದೇನೆ. ಯತಿಕುಲ ಬಿರುದು ಭಕ್ತರ ಒಂದು ಸಂಕೇತವಷ್ಟೇ. ನನ್ನನ್ನು ಹೊಗಳುವ ಭರದಲ್ಲಿ ಇದ್ದದ್ದನ್ನೂ ಇಲ್ಲದ್ದನ್ನೂ ಹೇಳಿ ಪ್ರಶಂಸಿಸಿದ್ದಾರೆ. ಇದ್ದದ್ದನ್ನು ಸೇವೆಗೆ ಮುಡುಪಾಗಿಸುವೆ. ಇಲ್ಲದ್ದನ್ನು ಹಾಗೂ ಹೇಳಿದ್ದನ್ನು ಪಡೆಯಲು ಪ್ರಯತ್ನಿಸುತ್ತೇನೆ. ಭಗವಂತ ಆಯುಷ್ಯ ಪ್ರಾಪ್ತಿಸಿದ ಫಲವಾಗಿ 5 ಪರ್ಯಾಯ ಸಂಪನ್ನಗೊಳಿಸುವಂತಾಯಿತು. ಸಾರ್ವಜನಿಕ ಸಮ್ಮಾನಕ್ಕಿಂತ ಭಗವದ್ಭಕ್ತರ ಪ್ರೀತಿ-ವಿಶ್ವಾಸವೇ ಪ್ರಧಾನವಾದದ್ದು. ಅದು ಚಿರಕಾಲ ಉಳಿಯುವುದು.-ಪೇಜಾವರ ಶ್ರೀ ಚಿತ್ರ-ವರದಿ : ರೋನ್ಸ್ ಬಂಟ್ವಾಳ್