Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಚಿತ್ರಕಲಾ ಚಾವಡಿಯು ಜಂಟಿಯಾಗಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಅವರು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಮಾತಿನ ಮೂಲಕ ಹೇಳಲಾಗದ ವಿಷಯವನ್ನು ಕೂಡ ಕಲಾವಿದ ತನ್ನ ಚಿತ್ರದ ಮೂಲಕ ತಿಳಿಯಪಡಿಸುತ್ತಾನೆ. ಕಲಾವಿದನು ಯಾವ ತಪಸ್ವಿಗೂ ಕಡಿಮೆ ಇಲ್ಲ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿ ಕಾಣದ್ದನ್ನು ಕಲಾವಿದ ಕಾಣುತ್ತಾನೆ ಎಂದು ವಿವರಿಸಿದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ರಾಜೇಂದ್ರ ಕೇದಿಗೆ ಮಾತನಾಡಿ, ಕಲೆ, ಸಂಗೀತ, ಸಾಹಿತ್ಯ ಪ್ರಕೃತಿಗೆ ಹತ್ತಿರವಾದುದು ಎಂದು ಹೇಳಿದರು. ಚಿತ್ರ ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಪ್ರಕೃತಿ, ಇಲ್ಲಿನ ಸಂಸ್ಕೃತಿಗೆ ಹೊಡೆತ ಬೀಳುತ್ತಿದೆ. ಪ್ರಕೃತಿ ನಾಶವಾಗುತ್ತಿರುವ ಈ ಸಮಯದಲ್ಲಿ ನಾವೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುವ ಅಗತ್ಯವಿದೆ ಎಂದರು. ಬಿ. ಗಣೇಶ ಸೋಮಯಾಜಿ, ವಿಷ್ಣು ಶೇವಗೂರು, ಪೆರ್ಮುದೆ ಮೋಹನ್ ಕುಮಾರ್, ಶರತ್ ಹೊಳ್ಳ, ಕಮಾಲ್, ಪಾಂಡುರಂಗ ರಾವ್, ಅನಂತ ಪದ್ಮನಾಭ ರಾವ್, ದಿನೇಶ್ ಹೊಳ್ಳ, ಸಪ್ನಾ ನೊರೊನ್ಹಾ, ನವೀನ್ ಚಂದ್ರ ಬಂಗೇರ, ಜಾನ್ ಚಂದ್ರನ್, ಸತೀಶ್ ರಾವ್, ಸುಧೀರ್ ಕುಮಾರ್ ಕಾವೂರು, ಪೂರ್ಣೇಶ್, ತಾರಾನಾಥ ಕೈರಂಗಳ, ಬಾಲಕೃಷ್ಣ ಶೆಟ್ಟಿ, ಪುನೀಕ್ ಶೆಟ್ಟಿ, ಜಯಶ್ರೀ ಶರ್ಮ, ರಚನಾ ಸೂರಜ್, ನವೀನ್ ಕೋಡಿಕಲ್, ಈರಣ್ಣ, ಎ. ಮುರಳಿ ಅವರು ಚಿತ್ರಕಲಾ ಪ್ರದರ್ಶನವಿತ್ತು. ಕರಾವಳಿ ಚಿತ್ರಕಲಾ ಚಾವಡಿ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಪ್ರೊ| ಅನಂತ ಪದ್ಮನಾಭ ರಾವ್, ಗಣೇಶ್ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು.
Related Articles
ಏಕಗಮ್ಯಾನಂದ ಮಹಾರಾಜ್ ಅವರು ಮಾತನಾಡಿ, ಯಾವುದೇ ಧಾರ್ಮಿಕ ಕೇಂದ್ರವು ಆಧ್ಯಾತ್ಮಿಕತೆಗೆ ಸೀಮಿತವಾಗದೆ ಕಲೆ, ಶಿಕ್ಷಣ ಸೇರಿದಂತೆ ಸಾಮಾಜಿಕ ಚಟುವಟಿಕೆ ಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ರಾಮಕೃಷ್ಣ ಪರಮಹಂಸರು ಕೂಡ ಕಲಾವಿದರಾಗಿದ್ದರುಎಂದು ಹೇಳಿದರು.
Advertisement