ಪಡುಬಿದ್ರಿ: ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸಿದ್ದ ಪಡುಬಿದ್ರಿ ಸರಕಾರಿ ಹಿ.ಪ್ರಾ. ಶಾಲೆ ಇದೀಗ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಹೊಸ ರಂಗಿನೊಂದಿಗೆ ಪುಟಿದೆದ್ದಿದೆ. ಎಲ್‌ಕೆಜಿ, ಯುಕೆಜಿಯಿದ ಪದವಿಪೂರ್ವ ಶಿಕ್ಷಣ ತನಕವೂ ಇಲ್ಲಿ ಶಿಕ್ಷಣ ದೊರೆಯುತ್ತಿದೆ.480ರಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಆದರೆ, ಹಲವು ಬೇಡಿಕೆ, ಕೊರತೆಗಳಿಂದ ಈ ಶಾಲೆ ಬಳ ಲುತ್ತಿದೆ. ಪ್ರಾಥಮಿಕ ಶಾಲೆ ವಿಭಾಗಕ್ಕೆ ಮುಖ್ಯ ಶಿಕ್ಷಕ ಕೃಷ್ಣಯ್ಯ ಅವರ ಜತೆ ಐದು ಮಂದಿ ಅಧ್ಯಾಪಕರಿದ್ದಾರೆ. ಕನ್ನಡ- ಇಂಗ್ಲಿ ಷ್ ದ್ವಿಭಾಷಾ ಮಾಧ್ಯಮದೊಂದಿಗೆ ಮುಂದು ವ ರಿಯುತ್ತಿದೆ. ಆದರೆ, ಶಾಲೆಗೆ ಶಿಕ್ಷ ಕರು, ಕಟ್ಟಡ ಸೇರಿ ಮೂಲ ಸೌಕರ್ಯದ ಕೊರತೆ ಇದೆ. ಹಿಂದೆ ಲಾಲಾಜಿ ಮೆಂಡನ್ ಅವರು ಶಾಸಕರಾಗಿದ್ದಾಗ 2 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಹಂತ ತಲುಪಿತ್ತು. ಅದನ್ನು ಈಗ ಮರಳಿ ಪ್ರಯತ್ನಿಸಿ ಪಡೆಯಬೇಕಿದೆ ಎನ್ನುವುದು ಪಡುಬಿದ್ರಿಯ ಶಿಕ್ಷಣಪ್ರೇಮಿಗಳ ಆಶಯ.
ಆಟದ ಮೈದಾನಕ್ಕೆ ಆವರಣಬೇಕು
ಶಾಲೆಗೆ ವಿಶಾಲವಾದ ಆಟದ ಮೈದಾನವೂ ಇದೆ. ಆದರೆ, ಆವರಣ ಗೋಡೆ ಇಲ್ಲ. ಬಡಗು ಬದಿಯಲ್ಲಿ ಸ್ಥಳೀಯ ಮುಸ್ಲಿಮ್ ಸಹೋದರರು ಶಾಲಾ ಗೇಟ್ ನಿರ್ಮಾಣ ಮಾಡಿ ದ್ದಾರೆ. ಪಡುಬಿದ್ರಿ ಗ್ರಾ.ಪಂ. ನೆರವಿನಿಂದ ನರೇಗಾ ಯೋಜನೆಯ ಸುಮಾರು 5ಲಕ್ಷ ರೂ. ಬಳಸಿ ಬದಿಯ ಆವರಣ ಗೋಡೆಯನ್ನು ನಿರ್ಮಿಸಲಾಗುವುದೆಂದು ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ ಹೇಳಿದ್ದಾರೆ.
ಸರಕಾರಕ್ಕೆ ಒತ್ತಾಯ
ಕೆಪಿಎಸ್ ಶಾಲಾ ಅಭಿವೃದ್ಧಿಗಾಗಿ ಅನುದಾನದ ಬೇಡಿಕೆ ಯಿದೆ. ಆದರೆ, ಅನುದಾನ ಬಿಡುಗಡೆಗೆ ಪದೇಪದೆ ಸರಕಾರವನ್ನು ಒತ್ತಾಯಿಸಿದ್ದೇನೆ. ಶಾಸಕನ ನೆಲೆಯಲ್ಲಿ ಕೆಪಿಎಸ್ ಶಾಲೆಗೆ ಅನುದಾನ ಒದಗಿಸುವುದೂ ನನ್ನ ಜವಾಬ್ದಾರಿಯಾಗಿದೆ. ಅದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ.
*ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು
*ಆರಾಮ