Advertisement

Padubidri – Karkala ರಾಜ್ಯ ಹೆದ್ದಾರಿ: ಕಂಚಿನಡ್ಕದ ಟೋಲ್‌ ಶೀಘ್ರ ಆರಂಭ

12:20 AM Oct 05, 2023 | Team Udayavani |

ಪಡುಬಿದ್ರಿ: ಪಡುಬಿದ್ರಿ – ಕಾರ್ಕಳದ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿ ಟೋಲ್‌ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) 3 ವರ್ಷಗಳ ಅವಧಿಗೆ ಟೆಂಡರನ್ನು ಹಾಸನ – ಬೆಂಗಳೂರು ಮೂಲದ ರವಿ ಮೋಕ್ಷಿತ್‌ ಕಂಪೆನಿಗೆ ಖಾಯಂಗೊಳಿಸಿದೆ.

Advertisement

ಕಂಪೆನಿಯು ಕರಾರು ಪತ್ರಗಳ ಕೆಲಸ ಕಾರ್ಯಗಳನ್ನು ಮುಗಿಸಿ ಒಂದೆರಡು ತಿಂಗಳಲ್ಲಿ ಟೋಲ್‌ಗೇಟ್‌ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಹೆಜಮಾಡಿ ಟೋಲ್‌ನಲ್ಲಿರುವಂತೆ ಇಲ್ಲೂ ಪಡುಬಿದ್ರಿಯ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಒದಗಿಸುವುದಾಗಿ ಮೂಲಗಳು ತಿಳಿಸಿವೆ.

ಇದು ಕಾರ್ಯಗತವಾದಾಗ ರಾಜ್ಯದ ಬಹುತೇಕ ರಾಜ್ಯ ಹೆದ್ದಾರಿಗಳೂ ಟೋಲ್‌ ನೆಟ್‌ವರ್ಕ್‌ಗೆ ಸೇರ್ಪಡೆಯಾದಂತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next