Advertisement

ಪಡುಬೆಳ್ಳೆ: ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ

09:03 AM Jul 15, 2017 | |

ಶಿರ್ವ: ಪಡುಬೆಳ್ಳೆ- ಪಾಂಬೂರು ಬಳಿ ಗುರುವಾರ ಮುಂಜಾನೆ ಒಂದೇ ಕುಟುಂಬದ ನಾಲ್ವರು ವಿಷ ಪದಾರ್ಥ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ತಾಯಿ ಮತ್ತು ಸಹೋದರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

Advertisement

ಶಂಕರ ಆಚಾರ್ಯ ಅವರು ಸುಮಾರು ವರ್ಷಗಳಿಂದ ಪಡುಬೆಳ್ಳೆ ಯಲ್ಲಿ ಜುವೆಲರಿ ಅಂಗಡಿ ನಡೆಸುತ್ತಿದ್ದು ಉಡುಪಿ, ಶಿರ್ವ ಮತ್ತಿತರ ಕಡೆಗಳಿಂದ ಆಭರಣಗಳನ್ನು ತಂದು ತಯಾರಿಸಿ ಕೊಡುತ್ತಿದ್ದರು. ಸಾಲಬಾಧೆಯ ಬಗ್ಗೆ ಪರಿಚಿತರು, ಮಿತ್ರರು, ಸಂಬಂಧಿಕರು ನೆಂಟರಿಷ್ಟರಲ್ಲಿ ಹೇಳಿಕೊಳ್ಳಿರಲಿಲ್ಲ. ಆದರೂ ದೊಡ್ಡ ಮೊತ್ತದ ಸಾಲ ಬಾಧೆಯಿಂದ ಬಳಲುತ್ತಿದ್ದು ಸಾಲಬಾಧೆ ತಾಳಲಾಗದೆ ಅಥವಾ ಅವಮಾನ ತಪ್ಪಿಸಲು ಕುಟುಂಬ ಸಮೇತ ಆತ್ಮಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಕಾರಣ ಮಾತ್ರ ನಿಗೂಢವಾಗಿದೆ.

ಆತ್ಮಹತ್ಯೆಗೂ ಮುನ್ನ ಕರೆ: ಶಂಕರ ಆಚಾರ್ಯ ಅವರ ಹಿರಿಯ ಪುತ್ರಿ ಮುಂಜಾನೆ ಆತ್ಮಹತ್ಯೆಗೂ ಮುನ್ನ ತಾನು ಮದುವೆಯಾಗುವ ಹುಡುಗನೊಂದಿಗೆ ಫೋನ್‌ ಮೂಲಕ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಅಪ್ಪನ ಸುಮಾರು 10 ಲ.ರೂ. ಮೌಲ್ಯದ ಆಭರಣ ಕಳೆದುಹೋಗಿ ಆರ್ಥಿಕ ಸಂಕಷ್ಟದಲ್ಲಿದ್ದು ಧನ ಸಹಾಯ ಮಾಡಲು ವಿನಂತಿಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಾಪು ವೃತ್ತ ನಿರೀಕ್ಷಕ ಹಾಲ ಮೂರ್ತಿ ರಾವ್‌ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next