Advertisement

ಅಕಾಲಿಕ ಮಳೆಗೆ ಭತ್ತದ ಫ‌ಸಲು ನಷ್ಟ: ಸಮೀಕ್ಷೆಗೆ ಆಗ್ರಹ

03:14 PM Jan 17, 2021 | Adarsha |

ಬಾಳೆಹೊನ್ನೂರು: ಅಕಾಲಿಕ ಮಳೆಯಿಂದ ಬಾಳೆಹೊನ್ನೂರು ಬಿ. ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ತಲವಾನೆ ಗುರುಮೂರ್ತಿ ಗೌಡರ ಸುಮಾರು 3 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ಜಲಾವೃತಗೊಂಡು ಕಟಾವು ಮಾಡಿ ಸಂಗ್ರಹಿಸಿದ್ದ ಭತ್ತದ ಫಸಲು ಮೊಳಕೆಯೊಡೆದು ನಷ್ಟವಾಗಿದೆ.

Advertisement

ಅಲ್ಲದೆ ಕಾಫಿ ಬೀಜಗಳೆಲ್ಲ ಗಿಡದಿಂದ ಉದುರಿ ಹಾನಿಯಾಗಿದೆ ಹಾಗೂ ಹವಮಾನ ವೈಪರಿತ್ಯದಿಂದಾಗಿ ಕಾಫಿ ಗಿಡದಲ್ಲಿ ಕಾಫಿ ಹಣ್ಣು ಇರುವಾಗಲೇ ಹೂವುಗಳು ಅರಳಿವೆ. ಇದೇ ರೀತಿ ಮುಂದುವರಿದರೆ ಬರುವ ವರ್ಷ ಕಾಫಿ ಫಸಲೂ ಕೂಡ ಇಲ್ಲದಂತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ರೈತರು- ಜನರ ಅಭಿವೃದ್ದಿಗೆ ಯಡಿಯೂರಪ್ಪ ಯಾವುದೇ ರೀತಿ ಹಿಂದೆ ಬಿದ್ದಿಲ್ಲ: ಅಮಿತ್ ಶಾ

ಅಕಾಲಿಕ ಮಳೆಯಿಂದ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದಫಸಲು ಸಂಪೂರ್ಣ ಜಲಾವೃತಗೊಂಡ ಮೊಳಕೆಯೊಡೆದು ನಷ್ಟ ಸಂಭವಿಸಿದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ನೀಡಬೇಕು ಎಂದುಕೃಷಿಕ ತಲವಾನೆ ಗುರುಮೂರ್ತಿ ಗೌಡ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next