ಯಾದಗಿರಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಡಿ.31ರ ಮಂಗಳವಾರ ದಲಿತ ಪರ ಸಂಘಟನೆಗಳು ಶಹಾಪುರ ನಗರ ಬಂದ್ ಕರೆ ನೀಡಿದ್ದಾರೆ.
ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ಬಂದ್ ಘೋಷಿಸಿದ್ದು, .31ರ ಮಂಗಳವಾರ ಬೆಳಿಗ್ಗೆಯಿಂದಲೇ ನಗರಾದ್ಯಂತ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು.
ಶಹಾಪುರ ನಗರ ಬಂದ್ ಹಿನ್ನೆಲೆ ನಗರಾದ್ಯಂತ ಪೊಲೀಸ್ ಭಿಗಿ ಭದ್ರತೆ ಮಾಡಲಾಗಿದೆ. 1 ಡಿವೈಎಸ್ಪಿ, 4 ಸಿಪಿಐ, 13 ಪಿಎಸ್ ಐ, 10 ಎಎಸ್ ಐ, 3 ಡಿಎಆರ್ ತುಕಡಿ, 100 ಜನ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ಪರ್ಯಾಯ ಮಾರ್ಗದ ಪ್ರಯಾಣಿಕರ ಸಂಚಾರಕ್ಕೆ ಅನೂಕೂಲಕ್ಕಾಗಿ ರಾಯಚೂರು, ದೇವದುರ್ಗದಿಂದ ರಸ್ತಾಪುರ ಕ್ರಾಸ್ ನಿಂದ ಸಗರ ಮಾರ್ಗವಾಗಿ ಬಿಗುಡಿಗೆ ಹಾಗೂ ಸುರಪುರ ಕೃಷ್ಣಾಪುರ ಸಗರ ಮೂಲಕ ಬಿ ಗುಡಿಗೆ ಸಂಪರ್ಕ ಹಾಗೂ ಯಾದಗಿರಿಯಿಂದ ಹಳಿಸಗರ ಮಾರ್ಗವಾಗಿ ಎನ್ ಜಿಓ ಕಾಲೋನಿ ಮೂಲಕ ಬಿ ಗುಡಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಶಹಾಪುರ ಸಿಪಿಐ ಎಸ್. ಎಂ ಪಾಟೀಲ್ ಮಾಹಿತಿ ನೀಡಿದ್ದಾರೆ.