Advertisement
ದೇಶದಲ್ಲಿರು ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನನೀಗಿಸುವ ನಿಟ್ಟಿನಲ್ಲಿ ಆಮ್ಲಜನಕ ಉತ್ಪಾದಸನಾ ಘಟಕವನ್ನು ಭಾರತಕ್ಕೆ ಕಳುಹಿಸಿ ಕೊಟ್ಟಿದೆ.
Related Articles
Advertisement
“ಭಾರತದ ಇಟಾಲಿಯನ್ ರಾಯಭಾರಿ ವಿನ್ಸೆಂಜೊ ಡಿ ಲುಕಾ ಅವರು ಹಿರಿಯ ಐಟಿಬಿಪಿ ಅಧಿಕಾರಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಆಕ್ಸಿಜನ್ ಘಟಕವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. 48 ಗಂಟೆಗಳ ಒಳಗೆ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕವನ್ನು ಸ್ಥಾಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ” ಎಂದು ಗಡಿ ಕಾವಲು ಪಡೆ ವಕ್ತಾರರು ತಿಳಿಸಿದ್ದಾರೆ.
ಈ ಆಕ್ಸಿಜನ್ ಘಟಕವು ಈ ಆಸ್ಪತ್ರೆಯಲ್ಲಿ “ಶಾಶ್ವತವಾಗಿ” ಇರುತ್ತದೆ ಮತ್ತು ಇದು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಒಗ್ಗಟ್ಟಿನ ಸಂಕೇತವಾಗಿರಲಿಕ್ಕಿದೆ. ಈ ಸ‍್ನೇಹ ಸೌಹಾರ್ಧತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಐಟಿಬಿಪಿ ಅಧಿಕಾರಿಯೋರ್ವರು ಮಾತನಾಡಿ, ಇಟಲಿ ನೀಡಿದ ನೆರವಿಗೆ ಸರ್ಕಾರ ಮತ್ತು ಭಾರತದ ಜನರು ಎಂದಿಗೂ ಕೃತಜ್ಞರಾಗಿರುತ್ತಾರೆ ಎಂದು ಹೇಳಿದ್ದಾರೆ.
ಓದಿ : ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ