Advertisement

ಆರ್.ಆರ್.ನಗರದ 200 ಸೋಂಕಿತರಿರುವ ಆಸ್ಪತ್ರೆಯಲ್ಲೂ ಆಕ್ಸಿಜನ್ ಸಮಸ್ಯೆ: ಡಿ.ಕೆ.ಸುರೇಶ್

05:15 PM May 03, 2021 | Team Udayavani |

ರಾಮನಗರ: ಜಿಲ್ಲೆಯ ಸುಮಾರು 200 ಮಂದಿ ಕೋವಿಡ್ ಸೋಂಕಿತರು ಕೆಂಗೇರಿ ಬಳಿಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ಆಸ್ಪತ್ರೆಯಲ್ಲಿ ಕೆಲವೇ ಗಂಟೆಗಳಿಗೆ ಆಗುವಷ್ಟು ಆಕ್ಸಿಜನ್ ದಾಸ್ತಾನು ಇದೆ. ರಾಮನಗರ ಜಿಲ್ಲೆ ಮತ್ತೊಂದು ಚಾಮರಾಜನಗರ ಆಗುವ ಮುನ್ನ ತಕ್ಷಣ ಆಕ್ಸಿಜನ್ ಪೂರೈಕೆ ಮಾಡುವಂತೆ ಸಂಸದ ಡಿ.ಕೆ.ಸುರೇಶ್ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

Advertisement

ತಾವು ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸಂಸದರು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಪ್ರತಿದಿನ 8 ಟನ್‌ಗಳಷ್ಟು ಆಕ್ಸಿಜನ್ ಅಗತ್ಯವಿದೆ. ಆದರೆ 2 ರಿಂದ 3 ಟನ್ ಮಾತ್ರ ಪೂರೈಕೆ ಆಗುತ್ತಿದೆ. ಆಕ್ಸಿಜನ್ ಅಭಾವದಿಂದ ಎಲ್ಲಾ ಸೋಂಕಿತರಿಗೂ ಚಿಕಿತ್ಸೆ ಕೊಡುವುದು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಗಳ ವೈದ್ಯರು ತಮಗೆ ಮಾಹಿತಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ರೆಮಿಡಿಸಿವಿರ್ ಚುಚ್ಚುಮದ್ದಿನ ಅಭಾವವು ಸೋಂಕಿತರನ್ನು ಕಾಡುತ್ತಿದೆ. ಈ ವಿಚಾರದಲ್ಲಿ ತಾವು ರಾಜರಾಜೇಶ್ವರಿಮತ್ತು ದಯಾನಂದ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಂದ ಮಾಹಿತಿ ಇರುವುದಾಗಿ, ಕಾಳಸಂತೆಯಲ್ಲಿ ಈ ಔಷಧ ಮಾರಾಟವಾಗುತ್ತಿದೆ ಎಂದು ದೂರಿದ್ದಾರೆ.

ತಕ್ಷಣ ಎಚ್ಚೆತ್ತು ವೈದ್ಯಕಿಯ ಕಾಲೇಜು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಿಗೆ ಅಗತ್ಯವಿರುವ ಪ್ರಮಾಣದ ರೆಮಿಡಿಸಿವಿರ್ ಚುಚ್ಚುಮದ್ದು ಮತ್ತು ಆಕ್ಸಿಜನ್ ಪೂರೈಕೆ ಮಾಡಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಾವು-ನೋವುಗಳನ್ನು ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next