Advertisement
ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಆಸ್ಪತ್ರೆಯಲ್ಲಿ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯಸೌಲಭ್ಯಗಳನ್ನು ಒಳಗೊಂಡ 30ಕ್ಕೂ ಹೆಚ್ಚುಹಾಸಿಗೆಗಳು ಜನವರಿಯಿಂದ ಖಾಲಿ ಇವೆ. ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ವೈದ್ಯರನ್ನೂನಿಯೋಜಿಸಿಲ್ಲ. ಇದರಿಂದ ಲೆಕ್ಕಕ್ಕುಂಟು ಸೇವೆಗಿಲ್ಲ ಎನ್ನುವಂತಾಗಿದೆ. ಕ್ಸಿಜನ್ ಸಹಿತ ಹಾಸಿಗೆಗಳ ವಾರ್ಡ್ ಇದ್ದೂ ಇಲ್ಲದಂತಾಗಲು ಪ್ರಮುಖ ಕಾರಣ ಉದ್ದೇಶಿತ ಆಸ್ಪತ್ರೆಯಲ್ಲಿನ ವೈದ್ಯರನ್ನು ಇತರೆ ಆಸ್ಪತ್ರೆಗಳಿಗೆ ನಿಯೋಜನೆ ಮಾಡಿದ್ದು, ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಮೂಲಗಳು ಉದಯವಾಣಿಗೆ ತಿಳಿಸಿವೆ.
Related Articles
Advertisement
ಇದೇ ಕಾರಣಕ್ಕೆ ಬಿಬಿಎಂಪಿ ವಾರ್ ರೂಂಪೋರ್ಟಲ್‌ನಲ್ಲಿ ಈ ಆಸ್ಪತ್ರೆಯನ್ನು ಮಾಗಡಿ ರಸ್ತೆಯಕೋವಿಡ್ ಕೇರ್ ಸೆಂಟರ್ ಎಂದು ನಮೂದಿಸಿದಉದಾಹರಣೆಯೂ ಇದೆ.ಪೋರ್ಟಲ್‌ನಲ್ಲಿ ಹಾಸಿಗೆ ಬುಕ್ಕಿಂಗ್‌ಮಾಡಿಸಿದ ರೋಗಿಗಳು ಅಥವಾ ಅವರಸಂಬಂಧಿಗಳು ಆ್ಯಂಬುಲೆನ್ಸ್‌ನಲ್ಲಿ ಕುಷ್ಠರೋಗಆಸ್ಪತ್ರೆ ಬಾಗಿಲಿಗೆ ಬರುತ್ತಿದ್ದಂತೆ, ಈ ಆಸ್ಪತ್ರೆಗೆ ದಯವಿಟ್ಟು ಬೇಡ. ಬೇರೆ ಕಡೆ ಕರೆದೊಯ್ಯಿರಿ ಎಂದು ಅಲವತ್ತುಕೊಂಡ ಉದಾಹರಣೆಗಳು ಇವೆ. ಆಗ ಆಸ್ಪತ್ರೆ ಸಿಬ್ಬಂದಿ, ಭಯಪಡುವ ಅಗತ್ಯವಿಲ್ಲ. ತಪ್ಪುಕಲ್ಪನೆ ಬದಿಗೊತ್ತಿ, ದಾಖಲಾಗಿಎಂದು ಬೇಡಿಕೊಂಡರೂ ಕೆಲವರು ವಾಪಸ್‌ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕೆ 2020ರ ಸೆಪ್ಟೆಂಬರ್- 2021ರಜನವರಿ ಮೊದಲ ವಾರದವರೆಗೆ ಈ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಕೊಂಡ ಸೋಂಕಿತರು ಕೇವಲ 40ಜನ. ನಂತರದಲ್ಲಿ ರೋಗಿಗಳ ಒತ್ತಡವೂ ಕಡಿಮೆಇದ್ದುದರಿಂದ ಬೇರೆಕಡೆಗೆ ಸಿಬ್ಬಂದಿಯನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯಕುಮಾರ್ ಚಂದರಗಿ