Advertisement
ಇದು ಪ್ರತಿ ಭಾರತೀಯನಿಗೂ ಹೆಮ್ಮೆಯ ಸಂಗತಿ. ಕೇವಲ ಎರಡೇ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ಆರೋಗ್ಯ ಸೇವೆಯ ಸಾಲಿಗೆ ಆಯುಷ್ಮಾನ್ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Related Articles
Advertisement
21,565 ಆಸ್ಪತ್ರೆಗಳಲ್ಲಿ ಈ ಯೋಜನೆಯ ಪ್ರಯೋಜನ ಲಭ್ಯವಿದೆ. ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಸುಮಾರು 13,412 ಕೋಟಿ ರೂ.ಗಳ ಚಿಕಿತ್ಸೆಯನ್ನು ಕೇಂದ್ರ ಸರಕಾರ ಉಚಿತವಾಗಿ ನೀಡಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ಟಾಪ್ ರಾಜ್ಯಗಳು: ಗುಜರಾತ್, ತಮಿಳುನಾಡು, ಛತ್ತೀಸ್‌ಗಢ, ಕೇರಳ ಹಾಗೂ ರಾಜಸ್ಥಾನ ರಾಜ್ಯಗಳು ಈ ವಿಮೆಯಿಂದ ಅತಿಹೆಚ್ಚು ಪ್ರಯೋಜನ ಪಡೆದುಕೊಂಡಿವೆ.
ಚಿಕಿತ್ಸೆ ಏನೇನು?: ಆರ್ಥೋಪೆಡಿಕ್ಸ್, ಕಾರ್ಡಿಯಾಲಜಿ, ಸಿಂಗಲ್ ಸ್ಟೆಂಟ್ ಅಳವಡಿಕೆ, ಸೊಂಟ ಮುರಿತ, ಬೈಪಾಸ್ ಸರ್ಜರಿಗಳಿಗೆ ವಿಮೆ ಹೆಚ್ಚು ಬಳಕೆಯಾಗಿದೆ.