Advertisement

Chikkodi: ಕಲುಷಿತ ಆಹಾರ ಸೇವಿಸಿ ನೂರಕ್ಕೂ ಅಧಿಕ ಮಂದಿ ಅಸ್ವಸ್ಥ

11:22 AM Aug 29, 2023 | Team Udayavani |

ಚಿಕ್ಕೋಡಿ: ಕಲುಷಿತ ಆಹಾರ ಸೇವಿಸಿ ನೂರಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಘಟನೆ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದಲ್ಲಿ ಸೋಮವಾರ ಪಟೇಲ ಎಂಬವರ ಮದುವೆ ಆಯೋಜನೆ ಮಾಡಲಾಗಿತ್ತು. ಮದುವೆಯಲ್ಲಿ ಬಾಡೂಟ ಸೇವಿಸಿದ ಜನ ಮಂಗಳವಾರ ವಾಂತಿ, ಬೇಧಿಯಿಂದ ಬಳಲುತ್ತಿದ್ದಾರೆ.

ಈಗಾಗಲೇ ಅಸ್ವಸ್ಥರಾದ ಎಲ್ಲರನ್ನೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next