ಕತಾರ್: ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ನೆರವಾಗುವ ಉದ್ದೇಶದಿಂದ ಔಟ್ ರೀಚ್ ಕತಾರ್ ಸಂಸ್ಥೆಯು ಭಾರತೀಯ ಸುಮುದಾಯ ಬೆನೆವಲಂಟ್ ಫೋರಂ(ICBF) ಮತ್ತು ಎಂಟಿಟಿ ಆಫ್ ಇಂಡಿಯಾ ಕತಾರ್ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮ ಐಸಿಸಿ ಚೀಫ್ನ ಅಶೋಕ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ಐಸಿಬಿಎಫ್ನ ಸಮನ್ವಯ ಅಧಿಕಾರಿ, ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ ಡಾ| ವೈಭವ್ ತಾಂಡಲ್ ಅವರು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಮತ್ತು ಪೋಷಕರನ್ನು ಸಮುದಾಯಕ್ಕೆ ಒಗ್ಗೂಡಿಸುವ ಘಟಕದ ಅನನ್ಯ ಪ್ರಯತ್ನವನ್ನು ಶ್ಲಾಘಿಸಿದರು. ಔಟ್ ರೀಚ್ ಕತಾರ್ ತನ್ನ ಕ್ರಿಯಾಶೀಲತೆಯ ಮೂಲಕ ಹೇಗೆ ನಡೆದು ಬಂದಿದೆ ಎಂದು ಅವರು ಪ್ರಸ್ತಾವಿಸಿದರು. ಸಮುದಾಯದ ಮೇಲೆ ಗಣನೀಯ ಧನಾತ್ಮಕ ಪರಿಣಾಮ ಬೀರುವ ಘಟಕದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅವರು ಉಲ್ಲೇಖಿಸಿದರು.
ಗೌರವ ಅತಿಥಿ, ಸಾಂಸ್ಕೃತಿಕ ಸಲಹೆಗಾರ್ತಿ ಅಮೀನಾ ಕೋಟ್ಬಾ ಮಾತನಾಡಿ, ಔಟ್ ರೀಚ್ ಕತಾರ್ ಸಮಾಜದ ಮೇಲೆ ಹೇಗೆ ಸಕಾರಾತ್ಮಕ ಕಂಪನ್ನು ಬೀರುತ್ತಿದೆ ಎನ್ನುವುದನ್ನು ಅವರು ವಿವರಿಸಿದರು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಕ್ಕೆ ತಾನು ಭೇಟಿಯಾಗಿರುವುದಾಗಿ ತಿಳಿಸಿದ ಅವರು, ಈ ಸಮಾರಂಭದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಪೋಷಕರು ಅದೃಷ್ಟವಂತರು ಎಂದರು. ಮುಖ್ಯ ಅತಿಥಿಗಳು, ಗೌರವ ಅತಿಥಿಗಳು ಮತ್ತು ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಔಟ್ ರೀಚ್ ಕತಾರ್‌ನ ಅಧ್ಯಕ್ಷ ಅವಿನಾಶ್ ಗಾಯಕ್ವಾಡ್ ಅವರು ಔಟ್ ರೀಚ್ ಕತಾರ್‌ನ ರಚನೆ ಮತ್ತು ಪ್ರಗತಿಯಲ್ಲಿರುವ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಔಟ್ ರೀಚ್ ಕತಾರ್‌ನ ಸಮೀರ್ ಮೂಸಾ ಅವರು ಸ್ವಾಗತಿಸಿ, ಪೆಹ್ಲಾ ಕದಮ್ ಕುರಿತು ಮಾತನಾಡಿದರು. ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಮತ್ತು ಅವರ ಮನೆಯವರಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು. ವೈಶಾಲಿ ಅಲ್ಡೋಂಕರ್, ಗಾಯತ್ರಿ ಮೋದಕ್ ಅವರು ವಿಶೇಷ ಅಗತ್ಯವಿರುವ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಾಫಾಲಜಿ ಕೌಂಟರ್ ಅನ್ನು ಹಾಕಿದ್ದರು.
ಐಸಿಸಿಯ ಹಂಗಾಮಿ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು, ಐಎಸ್‌ಸಿ ಅಧ್ಯಕ್ಷ ಅಬ್ದುಲ್ ರಹಮಾನ್, ಅಪೆಕ್ಸ್ ಸಂಸ್ಥೆಗಳ ಸದಸ್ಯರು, ಐಸಿಬಿಎಫ್ ಮಾಜಿ ಅಧ್ಯಕ್ಷ, ಔಟ್ ರೀಚ್ ಕತಾರ್‌ನ ಸಲಹಾ ಮಂಡಳಿ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಔಟ್ ರೀಚ್ ಕತಾರ್‌ನ ಸದಸ್ಯರು, ಸಮಿತಿಯ ಸದಸ್ಯರು, ಐಸಿಬಿಎಫ್ ಮತ್ತು ಅಂಗಸಂಸ್ಥೆಗಳ ಸದಸ್ಯರು, ಸಮುದಾಯದ ಮುಖಂಡರು, ಶಿಕ್ಷ$Rರು, ತರಬೇತುದಾರರು, ಮಕ್ಕಳು ಪೋಷಕರು ಉಪಸ್ಥಿತರಿದ್ದರು.
ಲಕ್ಷ್ಮೀ ಚೋಕಲಿಂಗಂ ಅವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಭಾಗವಹಿಸಿದವರಿಗೆ ಪ್ರಶಂಸನ ಪತ್ರವನ್ನು ನೀಡಲಾಯಿತು. ಮಾಧ್ಯಮ ನೇರಪ್ರಸಾರವನ್ನು ಅನಿತ್ ಮಾಡಿದರು. ಔಟ್ ರೀಚ್ ಕತಾರ್‌ನ ಕೋಶಾಧಿಕಾರಿ ಕೃಷ್ಣಕುಮಾರ್ ಬಂಡಕವಿ ವಂದಿಸಿದರು.