Advertisement
ಈ ಮೂಲಕ ಒಟ್ಟಾರೆ 1,395 ಸೋಂಕು ಪ್ರಕರಣಗಳ ಪೈಕಿ 543 ಮಂದಿ ಗುಣಮುಖರಾಗಿದ್ದು, ಬಾಕಿ 811 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
40 ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ, ಒಂದು ಪ್ರಕರಣದಲ್ಲಿ ಸೋಂಕಿತ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Advertisement
ಮಂಗಳವಾರ ಜಿಲ್ಲಾವಾರು ಸೋಂಕಿತರು/ ಹಿನ್ನೆಲೆ– ಮಂಡ್ಯ – 71. ಎಲ್ಲ ಮುಂಬಯಿ ಪ್ರಯಾಣ ಹಿನ್ನೆಲೆ.
– ದಾವಣಗೆರೆ – 22. ಸೋಂಕಿತರ ಸಂಪರ್ಕದಿಂದ 15 ಮಂದಿಗೆ, ಗುಜರಾತ್ ತಬ್ಲಿಘಿ ಜಮಾತ್ ಇಬ್ಬರಿಗೆ, ಅಂತರ್ ಜಿಲ್ಲಾ ಪ್ರಯಾಣ ಹಿನ್ನೆಲೆ ಇಬ್ಬರಿಗೆ, ಕೇರಳ ಒಬ್ಬರಿಗೆ, ನಗರದ ಕಂಟೈನ್ಮೆಂಟ್ ಪ್ರದೇಶ ಸಂಪರ್ಕ ಹಿನ್ನೆಲೆ ಇಬ್ಬರಿಗೆ.
– ಕಲಬುರಗಿ – 13. ಎಲ್ಲರೂ ಮುಂಬಯಿ ಪ್ರಯಾಣ ಹಿನ್ನೆಲೆ.
– ಶಿವಮೊಗ್ಗ – 10. ಮುಂಬಯಿ ಪ್ರಯಾಣ ಹಿನ್ನೆಲೆ ಐವರು, ಆಂಧ್ರ ಪ್ರಯಾಣ ಹಿನ್ನೆಲೆ ಒಬ್ಬ, ಕೇರಳ ಪ್ರಯಾಣ ಹಿನ್ನೆಲೆ ಇಬ್ಬರು, ಮತ್ತಿಬ್ಬರ ಸಂಪರ್ಕ ಹಿನ್ನೆಲೆ ಪತ್ತೆಯಾಗಿಲ್ಲ.
– ಬೆಂಗಳೂರು – 6. ಸೋಂಕಿತರ ಸಂಪರ್ಕದಿಂದ ಮೂವರಿಗೆ, ಕಂಟೈನ್ಮೆಂಟ್ ಹಿನ್ನೆಲೆ ಒಬ್ಬರಿಗೆ , ಐಎಲ್‌ಐ ಹಿನ್ನೆಲೆ ಒಬ್ಬರು, ಒಬ್ಬರ ಸಂಪರ್ಕ ಹಿನ್ನೆಲೆ ಪತ್ತೆಯಾಗಿಲ್ಲ.
– ಬಾಗಲಕೋಟೆ – 5. ಸೋಂಕಿತರ ಸಂಪರ್ಕದಿಂದ ನಾಲ್ಕು ಮಂದಿ, ಕೊಲ್ಲಾಪುರ ಪ್ರಯಾಣ ಹಿನ್ನೆಲೆ ಒಬ್ಬರು.
– ಚಿಕ್ಕಮಗಳೂರು- 5. ಮುಂಬಯಿ ಪ್ರಯಾಣ ಹಿನ್ನೆಲೆ ಮೂವರು, ಮತ್ತಿಬ್ಬರ ಸಂಪರ್ಕ ಹಿನ್ನೆಲೆ ಪತ್ತೆಯಾಗಿಲ್ಲ.
– ಉತ್ತರ ಕನ್ನಡ – 4. ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಇಬ್ಬರು, ಗುಜರಾತ್ ಹಾಗೂ ತಮಿಳುನಾಡು ಪ್ರಯಾಣ ಹಿನ್ನೆಲೆ ತಲಾ ಒಬ್ಬರು.
– ಉಡುಪಿ – 4. ಮುಂಬಯಿ ಪ್ರಯಾಣ ಹಿನ್ನೆಲೆ.
– ಹಾಸನ – 3. ಎಲ್ಲರೂ ಮುಂಬಯಿ ಪ್ರಯಾಣ ಹಿನ್ನೆಲೆ.
– ವಿಜಯಪುರ – 1. ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ.
– ಬೀದರ್ – 1. ಸೋಂಕಿತರ ಸಂಪರ್ಕದಿಂದ.
– ಯಾದಗಿರಿ – 1. ಮುಂಬಯಿ ಪ್ರಯಾಣ ಹಿನ್ನೆಲೆ.
– ಗದಗ- 1. ಮುಂಬಯಿ ಪ್ರಯಾಣ ಹಿನ್ನೆಲೆ.
– ಚಿತ್ರದುರ್ಗ-1. ತೀವ್ರ ಉಸಿರಾಟ ಹಿನ್ನೆಲೆ.
– ರಾಯಚೂರು -1. ಸೊಲ್ಲಾಪುರ ಪ್ರಯಾಣ ಹಿನ್ನೆಲೆ. ರಾಜ್ಯದ ಶೇ. 6.09 ಹಾಸಿಗೆಗಳು ಭರ್ತಿ
ಕೋವಿಡ್ ಸೋಂಕು ಚಿಕಿತ್ಸೆ ನೀಡಲು ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಮೀಸಲಿಟ್ಟಿದ್ದು, ಈ ಪೈಕಿ ಶೇ. 6.09ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಹೀಗಾಗಿ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಎದುರಾಗುವುದಿಲ್ಲ. ಅಂತೆಯೇ 28 ಸರಕಾರಿ ಮತ್ತು 18 ಖಾಸಗಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಆರು ಸಾವಿರಕ್ಕೂ ಹೆಚ್ಚು ಮಂದಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.