Advertisement

58 ಸೋಂಕಿತರಲ್ಲಿ 33 ಮಂದಿ ಗುಣಮುಖ

04:10 PM Jul 19, 2020 | Suhan S |

ಭದ್ರಾವತಿ: ತಾಲೂಕಿನಲ್ಲಿ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಜನ್ನಾಪುರದ ಎನ್‌ಟಿಬಿ ಕಚೇರಿ ಹಾಗೂ ಹೊಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಕೋವಿಡ್‌ ಪರೀಕ್ಷಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿನಿತ್ಯ ಬೆಳಗ್ಗೆ 10ರಿಂದ ಮಧ್ಯಾಹ್ನದವರೆಗೆ ಈ ಕೇಂದ್ರಗಳಲ್ಲಿ ಸಿಬ್ಬಂದಿ ಗಂಟಲ ದ್ರವ ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.

Advertisement

 ಶೇ. 50ಕ್ಕೂ  ಅಧಿಕ ಮಂದಿ ಗುಣಮುಖ: ತಾಲೂಕಿನಲ್ಲಿ ಶುಕ್ರವಾರದವರೆಗೆ ಕೋವಿಡ್ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 58 ಆಗಿದ್ದು, ಆ ಪೈಕಿ ನಗರ ವ್ಯಾಪ್ತಿಯಲ್ಲಿ 41,ಗ್ರಾಮೀಣ ಪ್ರದೇಶದಲ್ಲಿ 17 ಮಂದಿ ಸೇರಿದಂತೆ ಒಟ್ಟು 33 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ಹಿಂದಿರುಗುವ ಮೂಲಕ ಶೇ. 50 ಕ್ಕೂ ಅಧಿ ಕ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಎರಡು ಕೋವಿಡ್‌ ಕೇಂದ್ರಗಳ ಸಿದ್ಧತೆ: ವಿಐಎಸ್‌ಎಲ್‌ ಆಸ್ಪತ್ರೆಯಲ್ಲಿ 50 ಹಾಗೂ ದೇವರನರಸಿಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 72 ಹಾಸಿಗೆಗಳ ಕೋವಿಡ್‌ ಚಿಕಿತ್ಸಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದ್ದು ಅಂತಿಮ ಹಂತಕ್ಕೆ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next