Advertisement

Covid Scam: ಕೋವಿಡ್‌ ಹಗರಣಕ್ಕೆ ತಾರ್ಕಿಕ ಅಂತ್ಯ ಅಗತ್ಯ: ಸಚಿವ ಪ್ರಿಯಾಂಕ್‌

01:40 AM Nov 10, 2024 | Team Udayavani |

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಸರಕಾರ ಮಾಡಿರುವುದು ಘೋರ ಅಪರಾಧ ಅಷ್ಟೇ ಅಲ್ಲ, ಪಾಪ ಕೃತ್ಯ. ಅದರ ಪ್ರಾಯಶ್ಚಿತ್ತ ಆಗಬೇಕಿದ್ದರೆ ಇವರಿಗೆ ಶಿಕ್ಷೆ ಆಗಲೇಬೇಕು. ಇದಕ್ಕೊಂದು ತಾರ್ಕಿಕ ಅಂತ್ಯ ಕೊಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ನ್ಯಾ| ಕುನ್ಹಾ ಅವರ ವರದಿಯಲ್ಲಿ ಬಿಜೆಪಿ ಅವಧಿಯ ಅಕ್ರಮಗಳು ಬಯಲಾಗಿದ್ದು, ಇದೊಂದು ಲಜ್ಜೆಗೆಟ್ಟ ಸರಕಾರ ಎಂದು ನಾವು ಹೇಳುತ್ತಲೇ ಬಂದಿದ್ದೆವು. ಅದೀಗ ಸಾಬೀತಾಗಿದೆ ಎಂದರು.

ಇಡೀ ವಿಶ್ವವೇ ಭಯಭೀತಿಯ ವಾತಾವರಣದಲ್ಲಿತ್ತು. ಇಂತಹ ಸಂದರ್ಭದಲ್ಲಿ ಬಡವರ ಜೀವ ಉಳಿಸಬೇಕಾದ ಸರಕಾರ ದುಡ್ಡು ಹೊಡೆದಿದೆ. ಹೆಣದ ಮೇಲೆ ಹಣ ಹೊಡೆದಿದೆ. ಇದು ಘೋರ ಅಪರಾಧವಷ್ಟೇ ಅಲ್ಲ, ಪಾಪ ಕೃತ್ಯ. ಇದಕ್ಕೆ ತಕ್ಕ ಶಿಕ್ಷೆ ಆಗಲೇಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next