Advertisement
ಪುಣೆ ಕನ್ನಡ ಸಂಘದ ಶಕುಂತಲಾ ಜಗನ್ನಾಥ ಶೆಟ್ಟಿ ಸಭಾ ಭವನದಲ್ಲಿ ನಡೆದ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಪುಣೆ -ಮುಂಬಯಿ ಗಾನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಎಷ್ಟೇ ಕಷ್ಟದ ಜೀವನ ನಡೆಸಿದರೂ ಸ್ವಾಭಿಮಾನದ ಬದುಕನ್ನು ಹೊಂದಿರುವ ಬಂಟ ಸಮುದಾಯ ಇಂದು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡು ಪ್ರಗತಿ ಯನ್ನು ಕಂಡಿದ್ದರೂ ಕೂಡ ಬಹಳಷ್ಟು ಜನರು ಬಡತನದ ಬೇಗೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಂಥಹ ಜನರಿಗೆ ವಿದ್ಯಾಭಾರತಿ ಹಾಗೂ ಆರೋಗ್ಯ ಭಾರತಿ ಎಂಬ ಪರಿಕಲ್ಪನೆಯೊಂದಿಗೆ ಶಿಕ್ಷಣ ಹಾಗೂ ಆರೋಗ್ಯದ ಸೇವೆಯನ್ನು ದೊರಕಿಸುವಲ್ಲಿ ಬಾಕೂìರು ಮಹಾಸಂಸ್ಥಾನ ಯೋಜನೆಗಳನ್ನು ಹಾಕಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಬಾಕೂìರು ಸಂಸ್ಥಾನ ಬಂಟರಿಗೆ ಯಾವ ರೀತಿಯಲ್ಲಿ ಮೂಲ ಎಂಬುದನ್ನು ಎಲ್ಲರೂ ಅರಿತುಕೊಳ್ಳುವ ಆವಶ್ಯಕತೆಯಿದೆ. ಮೂರು ವರ್ಷಗಳ ಕಾಲ ಬಾಕೂìರು ಮಹಾಸಂಸ್ಥಾನದ ಬಗ್ಗೆ ಸತತ ಅಧ್ಯಯನ ಮಾಡಿ ಇತಿಹಾಸದ ಸತ್ಯಾಂಶಗಳನ್ನು ಅರಿತುಕೊಂಡು ಅಳಿಯಕಟ್ಟು ಪರಂಪರೆಯನ್ನು ಹೊಂದಿದ ಬಂಟ ಕುಲದ ಉದ್ಧಾರಕ್ಕಾಗಿ ಸಂಸ್ಥಾನವನ್ನು ಪುನರ್ ನಿರ್ಮಾಣಗೊಳಿಸುವ ಕಾರ್ಯವನ್ನು ಕೈಗೆತ್ತಿ ಕೊಂಡಿದ್ದು, ಸಮುದಾಯದ ಹಿತವೇ ಹೊರತು ಇದರಲ್ಲಿ ಯಾವುದೇ ಸ್ವಾರ್ಥ ಹಿತಾಸಕ್ತಿಯಿಲ್ಲದೆ ಕೇವಲ ಮಾರ್ಗದರ್ಶಕರಾಗಿದ್ದುಕೊಂಡು ಬಂಟ ಸಮಾಜದ ಅಗ್ರಗಣ್ಯ ದಾನಿಗಳ ನೆರವಿನೊಂದಿಗೆ ಕಾರ್ಯ ಪ್ರವೃತ್ತರಾಗಿದ್ದೇವೆ. ಬರುವ ಎಪ್ರಿಲ್ 19 ರಿಂದ 21 ರ ವರೆಗೆ ಬಾಕೂìರು ಸಂಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪರಮಪವಿತ್ರ ನಾಗಮಂಡಲ ಸೇವೆ, ಅಂತೆಯೇ 36 ಮೂಲ ನಾಗದೇವರ ವಿಗ್ರಹ ಮತ್ತು ಮೂಲದೈವಗಳ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪುಣೆಯ ಎಲ್ಲ ಸಮಾಜ ಬಾಂಧವರು ಭಾಗವಹಿಸಿ ಸಹಕಾರ ನೀಡಬೇಕು. ಅದೇ ರೀತಿ ಪುಣೆಯಲ್ಲಿ ಸಂತೋಷ್ ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿರುವುದು ಸಮುದಾಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ ಎಂದರು.
Related Articles
Advertisement
ವಿಕೇಶ್ ರೈ ಶೇಣಿ, ಮದಂಗಲ್ಲು ಆನಂದ ಭಟ್, ಸುಕೇಶ್ ಶೆಟ್ಟಿ ಎಣ್ಣೆಹೊಳೆ ಯಕ್ಷಗಾನದ ಗಣಪತಿ ಸ್ತುತಿಯನ್ನು ಮಾಡಿದರು. ಡಾ| ಸಂತೋಷ ಭಾರತಿ ಶ್ರೀಪಾದರನ್ನು ಹಾರಾರ್ಪಣೆಯ ಮೂಲಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಸಂಗೀತ ಕಾರ್ಯಕ್ರಮ ನೀಡಿದ ನಂದಿನಿ ರಾವ್ ಗುಜರ್ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಸತ್ಕರಿಸಲಾಯಿತು.
ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಸಂತೋಷ್ ಶೆಟ್ಟಿ ವಂದಿಸಿದರು. ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಗಣೇಶ್ ಪೂಂಜಾ, ಶ್ರೀಧರ ಶೆಟ್ಟಿ ಕಲ್ಲಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರುಂಧತಿ ಪಟವರ್ಧನ್ ಬಳಗದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ವಿದುಷಿ ಶ್ರೀಮತಿ ನಂದಿನಿ ರಾವ್ ಗುಜರ್ ಅವರಿಂದ ಸುಶ್ರಾವ್ಯ ಪುರಂದರದಾಸರ ಕೀರ್ತನೆಗಳ ಗಾಯನ ಹಾಗೂ ಬಾಕೂìರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ್ ಭಾರತಿ ಶ್ರೀಪಾದರಿಂದ ದಾಸಕೀರ್ತನೆಗಳ ವೈಚಾರಿಕ ವಿಶ್ಲೇಷಣೆ ನಡೆಯಿತು.
ಜ್ಞಾನಭಾರತಿ ವೇದಿಕೆಯ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದ್ದು ಪೂಜ್ಯ ಸಂತೋಷ ಭಾರತಿ ಶ್ರೀಪಾದರು ಪುಣೆ ಬಂಟರ ಭವನದ ಹಿಂದಿರುವ ಪ್ರೇರಕ ಶಕ್ತಿಯಾಗಿದ್ದಾರೆ. ಯಾವುದೇ ಸ್ವಾರ್ಥವಿರಿಸದೆ ಸಮಾಜದ ಅಭ್ಯು ದಯದ ಚಿಂತನೆ ನಡೆಸಿ ಬಾರ್ಕೂರು ಸಂಸ್ಥಾನ ಕಟ್ಟುವ ಅವರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ – ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು (ಅಧ್ಯಕ್ಷರು : ಪುಣೆ ಬಂಟರ ಸಂಘ). ನಾವೆಲ್ಲರೂ ನಮ್ಮಲ್ಲಿನ ಅಹಂ ಬದಿಗಿಟ್ಟು ಪೂಜ್ಯ ಶ್ರೀಪಾದರ ಸಮಾಜ ಕಲ್ಯಾಣದ ಸಂಕಲ್ಪಕ್ಕೆ ಕೈಜೋಡಿಸಬೇಕಾಗಿದೆ. ಎಪ್ರಿಲನಲ್ಲಿ ನಡೆಯಲಿರುವ ಸಮಾರಂಭಕ್ಕೆ ಪ್ರತಿಯೋರ್ವ ಬಂಟರೂ ಉಪಸ್ಥಿತರಿರಬೇಕು
– ವಿಟಲ್ ಹೆಗ್ಡೆ (ವಿಶ್ವಸ್ತರು : ಬಾರ್ಕೂರು ಮಹಾಸಂಸ್ಥಾನ). ನಾವು ಸದ್ಗುಣವಂತ, ಮುಂದುವರಿದ ಸಮಾಜವಾದರೂ ಗುರುವಿಲ್ಲದ ಸಮಾಜ ವಾಗಿದ್ದು ಇದೀಗ ಗುರುಗಳ ಭಾಗ್ಯ ಒದಗಿರು ವುದು ನಮ್ಮ ಪುಣ್ಯ. ಮಾತ್ರವಲ್ಲ ನಮ್ಮದೇ ಬಾಕೂìರು ಸಂಸ್ಥಾನದ ಏಳಿಗೆಗೆ ಸಹಕಾರ ನೀಡಬೇಕಾಗಿದೆ
– ಕುಶಲ್ ಹೆಗ್ಡೆ
(ಅಧ್ಯಕ್ಷರು : ಪುಣೆ ಕನ್ನಡ ಸಂಘ). ಬಾಕೂìರು ಸಂಸ್ಥಾನ ಪೂಜ್ಯ ಶ್ರೀಪಾದರ ನೇತೃತ್ವದಲ್ಲಿ ಬಂಟ ಸಮಾಜದ ಪ್ರಗತಿಗೆ, ಒಗ್ಗಟ್ಟಿಗೆ ವೇದಿಕೆಯಾಗಿದ್ದು ಬಲಿಷ್ಠ ಸಮುದಾಯದ ಮೂಲಕ ಭವಿಷ್ಯದ ಪೀಳಿಗೆಗೆ ಕೊಡುಗೆ ನೀಡುವ ಕಾರ್ಯವಾಗಿದೆ
– ಕರುಣಾಕರ ಶೆಟ್ಟಿ (ಮಹಾಪೋಷಕರು : ಬಾರ್ಕೂರು ಮಹಾಸಂಸ್ಥಾನ).